Friday, September 18, 2026

BDA Apartments

22 ಕನ್ನಡ ಹಾಡುಗಳನ್ನಾಡಿದ ಮೈಸೂರಿನ ಬಾಲ ಪ್ರತಿಭೆಗೆ “ಏಷ್ಯಾ ಗ್ರ್ಯಾಂಡ್‌ಮಾಸ...
Home Front Page 22 ಕನ್ನಡ ಹಾಡುಗಳನ್ನಾಡಿದ ಮೈಸೂರಿನ ಬಾಲ ಪ್ರತಿಭೆಗೆ “ಏಷ್ಯಾ ಗ್ರ್ಯಾಂಡ್‌ಮಾಸ್ಟರ್ 2026” ಪ್ರಶಸ್ತಿ

22 ಕನ್ನಡ ಹಾಡುಗಳನ್ನಾಡಿದ ಮೈಸೂರಿನ ಬಾಲ ಪ್ರತಿಭೆಗೆ “ಏಷ್ಯಾ ಗ್ರ್ಯಾಂಡ್‌ಮಾಸ್ಟರ್ 2026” ಪ್ರಶಸ್ತಿ

ಮೈಸೂರು,ಜೂನ್,17,2026 (www.justkannada.in): ಮೈಸೂರಿನ ಜೆಎಸ್‌ಎಸ್ ಲೇಔಟ್ 2ನೇ ಹಂತದ ಪುಟ್ಟ ಪ್ರತಿಭೆ ಪ್ರಾಂಜಲಿ ರಾಜ್ ಎ. ಅವರು ತಮ್ಮ ಅದ್ಭುತ ಸಾಧನೆಯ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.

ಕೇವಲ 2 ವರ್ಷ 8 ತಿಂಗಳ ವಯಸ್ಸಿನಲ್ಲೇ, 22 ಕನ್ನಡ ಹಾಡುಗಳನ್ನು ಹಾಡಿದ ಸಾಧನೆಗಾಗಿ “ಏಷ್ಯಾ ಗ್ರ್ಯಾಂಡ್‌ಮಾಸ್ಟರ್ 2026” ಪ್ರಶಸ್ತಿ ಪಡೆದ ಮೊದಲ ಬಾಲ ಪ್ರತಿಭೆಯಾಗಿದ್ದಾರೆ.

ಇದರ ಜೊತೆಗೆ, *ಅತಿ ಹೆಚ್ಚು ಕನ್ನಡ ಹಾಡುಗಳನ್ನು ಹಾಡಿದ ಪುಟ್ಟ ಮಗುವೆಂಬ ದಾಖಲೆಯೊಂದಿಗೆ “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2024″*ರಲ್ಲಿ ಸ್ಥಾನ ಪಡೆದು ಮತ್ತೊಂದು ಹೆಮ್ಮೆಯ ಸಾಧನೆ ಮಾಡಿದ್ದಾರೆ.

ಕನ್ನಡ ಭಾಷೆ ಹಾಗೂ ಕನ್ನಡ ಹಾಡುಗಳ ಮೇಲಿನ ಪ್ರೀತಿ ಮತ್ತು ಚಿಕ್ಕ ವಯಸ್ಸಿನಲ್ಲೇ ತೋರಿದ ಅದ್ಭುತ ಪ್ರತಿಭೆ ಪ್ರಾಂಜಲಿಯನ್ನು ವಿಶೇಷವಾಗಿಸಿದೆ. ಅವರ ಸಾಧನೆ ಕೇವಲ ಅವರ ಕುಟುಂಬದ ಹೆಮ್ಮೆ ಮಾತ್ರವಲ್ಲ, ಇಡೀ ಕನ್ನಡ ನಾಡಿನ ಹೆಮ್ಮೆಯಾಗಿದೆ ಮತ್ತು ಇತರ ಮಕ್ಕಳಿಗೂ ಪ್ರೇರಣೆಯಾಗಿದೆ.kannada asia child.jpg1

ಪ್ರಾಂಜಲಿ ರಾಜ್ ಎ. ಅವರು ರಂಜಿತಾ ಎಂ.ಎಲ್. ಹಾಗೂ ಅನಿಲ್ ರಾಜ್ ಎಂ.ಬಿ. ಅವರ ಪುತ್ರಿ. ಅನಿಲ್ ರಾಜ್ ಅವರು ಭಾರತೀಯ ಅಂಚೆ ಇಲಾಖೆಯಲ್ಲಿ (India Post) ಸೇವೆ ಸಲ್ಲಿಸುತ್ತಿದ್ದಾರೆ.

ಅವರ ಸಾಧನೆಯ ಹಿಂದೆ ಕುಟುಂಬದ ಅಪಾರ ಪ್ರೋತ್ಸಾಹವಿದೆ. ವಿಶೇಷವಾಗಿ ತಾತ ಲೋಕೇಶ್ ಎಚ್.ಎಸ್. (ನಿವೃತ್ತ ಆರ್‌ಎಸ್‌ ಐ, ಪೊಲೀಸ್ ಇಲಾಖೆ), ಅಜ್ಜಿ ಲತಾ ಲೋಕೇಶ್ (ನಿವೃತ್ತ ಸರ್ಕಾರಿ ಶಿಕ್ಷಕಿ), ತಾತ ದಿ. ಎನ್. ಬಾಲರಾಜು (ನಿವೃತ್ತ ಮುಖ್ಯ ಶಿಕ್ಷಕರು) ಹಾಗೂ ಅಜ್ಜಿ ಪ್ರೇಮಲತಾ ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ಮಹತ್ತರವಾಗಿದೆ.2026 www justkannada jk02_new jk02 new

“ಪ್ರಾಂಜಲಿ ರಾಜ್ ಎ. ಅವರ ಸಾಧನೆ ಕೇವಲ ಅವರ ಕುಟುಂಬದ ಹೆಮ್ಮೆ ಮಾತ್ರವಲ್ಲ, ಕನ್ನಡ ನಾಡಿನ ಹೆಮ್ಮೆ ಕೂಡ ಆಗಿದೆ.”

ಪ್ರಾಂಜಲಿ ಅವರ ಹಾಡುಗಳನ್ನು ಕೇಳಲು ಹಾಗೂ ಅವರ ಸಾಧನೆಗಳನ್ನು ಅನುಸರಿಸಲು ಈ ಕೆಳಗಿನ ಲಿಂಕ್ ಸಂಪರ್ಕಿಸಿ

📱 Instagram: grandmasterpranjali_official

ರಾಘವೇಂದ್ರ ಸ್ವಾಮಿ 🙏 #raghavendraswamy

▶️ YouTube: GrandmasterPranjali

Key words: Asia Grandmaster 2026  award, Mysore, child, talent, Kannada songs