Sunday, August 2, 2026

BDA Apartments

Home Front Page ನಾನು ಸಚಿವ ಸ್ಥಾನ ಕೇಳಿಲ್ಲ: ಆದ್ರೆ ಡಿಸಿಎಂ ಸ್ಥಾನ ನೀಡಲೆಂದು ಅಭಿಮಾನಿಗಳಿಂದ ಪ್ರತಿಭಟನೆ- ಎಸ್.ಎಸ್ ಮಲ್ಲಿಕಾರ್ಜುನ್

ನಾನು ಸಚಿವ ಸ್ಥಾನ ಕೇಳಿಲ್ಲ: ಆದ್ರೆ ಡಿಸಿಎಂ ಸ್ಥಾನ ನೀಡಲೆಂದು ಅಭಿಮಾನಿಗಳಿಂದ ಪ್ರತಿಭಟನೆ- ಎಸ್.ಎಸ್ ಮಲ್ಲಿಕಾರ್ಜುನ್

ದಾವಣಗೆರೆ,ಜೂನ್,17,2026 (www.justkannada.in):  ನಾನು ಎಂದೂ ಸಚಿವ ಸ್ಥಾನ ಕೇಳಿಲ್ಲ. ಕಾಂಗ್ರೆಸ್ ನಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜನ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಸ್ .ಎಸ್ ಮಲ್ಲಿಕಾರ್ಜುನ್, ಯಾರಿಗೆ ಸಚಿವ ಸ್ಥಾನ ನೀಡಿದರೂ ಪಕ್ಷ ಜನರಿಗೆ ಒಳ್ಳೆಯದಾಗುತ್ತೆ 2028ಕ್ಕೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಕೆಲಸ ಮಾಡಬೇಕಿದೆ ಎಂದರು.

ನಮ್ಮ  ಅಭಿಮಾನಿಗಳೂ ಡಿಸಿಎಂ ಸ್ಥಾನ ಕೊಡಬೇಕೆಂದು ಪ್ರತಿಭಟಿಸಿದ್ದಾರೆ ಯಾವುದೇ ಪ್ರತಿಭಟನೆ ಒತ್ತಾಯ ಮಾಡಬೇಡಿ ಎಂದಿದ್ದೇನೆ.  ಎಲ್ಲ ಶಾಸಕರಿಗೂ ಸಚಿವನಾಗಬೇಕೆಂಬ ಆಸೆ ಇರುತ್ತದೆ.  ಹೊಸದಾಗಿ ಆಯ್ಕೆಯಾದವರೂ ಕೂಡ ಸಚಿವ ಸ್ಥಾನ ಕೇಳುತ್ತಿದ್ದಾರೆ ಎಂದರು.

Key words:  ministerial post, Fans, protested, DCM, post, S.S. Mallikarjun