Monday, September 14, 2026

BDA Apartments

ಸಿಲಿಂಡರ್ ಪೂರೈಕೆ ವ್ಯತ್ಯಯ: ದೇಶದ ಜನರಿಗೆ ಕಾಂಗ್ರೆಸ್ ಗೊಂದಲ ಮೂಡಿಸುವ ಕೆಲಸ...
Home Front Page ಸಿಲಿಂಡರ್ ಪೂರೈಕೆ ವ್ಯತ್ಯಯ: ದೇಶದ ಜನರಿಗೆ ಕಾಂಗ್ರೆಸ್ ಗೊಂದಲ ಮೂಡಿಸುವ ಕೆಲಸ- ಕೇಂದ್ರ ಸಚಿವ ಪ್ರಹ್ಲಾದ್...

ಸಿಲಿಂಡರ್ ಪೂರೈಕೆ ವ್ಯತ್ಯಯ: ದೇಶದ ಜನರಿಗೆ ಕಾಂಗ್ರೆಸ್ ಗೊಂದಲ ಮೂಡಿಸುವ ಕೆಲಸ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಬೆಂಗಳೂರು,ಮಾರ್ಚ್,13,2026 (www.justkannada.in):  ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ  ವ್ಯತ್ಯಯ ಹಿನ್ನೆಲೆಯಲ್ಲಿ   ದೇಶದ ಜನರಿಗೆ ಕಾಂಗ್ರೆಸ್ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ಇಂದು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಸಿ, ಹೆಚ್ಚಾಗಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುತ್ತಿರುವ ಕಾರಣ ಸರಬರಾಜು ಆಗಿಲ್ಲ . ದೇಶದ ಜನರಿಗೆ ಗೊಂದಲ ಮೂಡಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಪೆಟ್ರೋಲ್ ಡೀಸೆಲ್ ಕೊರತೆ ಆಗುತ್ತೆಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ. 40 ದೇಶಗಳಿಂದ ಭಾರತಕ್ಕೆ ಪೆಟ್ರೋಲಿಯಂ ಉತ್ಪನ್ನ ಬಂದಿದೆ ಸಿಲಿಂಡರ್ ವಿಚಾರವಗಿ ಜನರನ್ನ ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ಅತಿಯಾದ ಬುಕ್ಕಿಂಗ್ ಹಿನ್ನೆಲೆ  ಗ್ಯಾಸ್ ಪೂರೈಕೆಗೆ ಮಿತಿ ಹಾಕಲಾಗಿದೆ.  33 ಕೋಟಿ ಮನಗೆ ಎಲ್ಪಿಜಿ ಗ್ಯಾಸ್ ಸರಬರಾಜು ಆಗಿದೆ.  5 ದಿನದಲ್ಲಿ ಶೇ 28 ರಷ್ಟು ಎಲ್ಪಿಜಿ ಉತ್ಪಾದನೆ ಹೆಚ್ಚಿಸಲಾಗಿದೆ.  ಕಾಂಗ್ರಸ್ ಬೇಜವಾಬ್ದಾರಿತನ ಮೆರೆಯುತ್ತಿದೆ.  ಮಧ್ಯಪ್ರಾಚ್ಯದಲ್ಲಿ ಮೂಲಸೌಕರ್ಯಕ್ಕೆ ಸಮಸ್ಯೆಯಾಗಿದೆ. ಅಗತ್ಯವಿದ್ದರೇ ಭಾರತದಲ್ಲೇ ಹೆಚ್ಚು ಉತ್ಪಾದನೆ ಮಾಡುತ್ತೇವೆ  ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

Key words: Cylinder, supply, disruption,  Congress, Union Minister, Pralhad Joshi