ಮತದಾನ ಮಾಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಸಿಎಂ ಬಿಎಸ್ವೈ

ಬೆಂಗಳೂರು, ಮೇ 10, 2023 (www.justkannada.in): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿನ ಜಯನಗರದಲ್ಲಿಮತದಾನ ಮಾಡಿದರು.

ಭಾರತ್ ಎಜುಕೇಷನ್ ಸೊಸೈಟಿಯ ಮತಗಟ್ಟೆಗೆ ಆಗಮಿಸಿದ ನಿರ್ಮಲಾ ಸೀತಾರಾಮನ್ ಸರದಿ ಸಾಲಿನಲ್ಲಿ ಆಗಮಿಸಿ ಮತದಾನ ಮಾಡಿದರು.

ಶಿಕಾರಿಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಕುಟುಂಬ ಮತ ಚಲಾಯಿಸಿತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಸಂಸದ ರಾಘವೇಂದ್ರ ಅವರು ತಮ್ಮ ಕುಟುಂಬ ಸದಸ್ಯರೊಡನೆ ಶಿಕಾರಿಪುರದಲ್ಲಿ ಮತದಾನ‌ ಮಾಡಿದರು.

ಮಾಜಿ ಡಿಸಿಎಂ ಪರಮೇಶ್ವರ್ ಮತ ಚಲಾವಣೆ ತುಮಕೂರಿನ ಸಿದ್ಧಾರ್ಥ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪತ್ನಿ ಕನ್ನಿಕಾ ಪರಮೇಶ್ವರ್ ಅವರೊಂದಿಗೆ ಆಗಮಿಸಿ ಮತದಾನ ಮಾಡಿದರು. ಸಚಿವ ಆರ್ ಅಶೋಕ್ ಅವರು ಪತ್ನಿ ಪ್ರಮೀಳಾ ಅವರೊಂದಿಗೆ ಸೈಂಟ್ ಕ್ಲಾರೆಟ್ ಸ್ಕೂಲ್ ನಲ್ಲಿ ಮತದಾನ ಮಾಡಿದರು.