ಮತದಾನದ ಬೆನ್ನಲ್ಲೆ ಶುರುವಾಯ್ತು ಅಭ್ಯರ್ಥಿಗಳ ಪರ ಬೆಟ್ಟಿಂಗ್ ಭರಾಟೆ

ಬೆಂಗಳೂರು, ಮೇ 10, 2023 (www.justkannada.in): ವಿಧಾನ ಸಭೆ ಚುನಾವಣೆ ಮತದಾನದ ಬೆನ್ನಲ್ಲೆ ರಾಜ್ಯದಾದ್ಯಂತ ಬೆಟ್ಟಿಂಗ್‌ ಭರಾಟೆಯೂ ಜೋರಾಗಿದೆ.

ನಾನಾ ಪಕ್ಷಗಳ ಅಭ್ಯರ್ಥಿಗಳ ಪರ-ವಿರೋದ ಕೆಲವರು ಅಡಿಕೆ, ತೆಂಗಿನ ತೋಟವನ್ನೇ ಪಣಕ್ಕಿಟ್ಟರೆ, ಇನ್ನು ಕೆಲವರು ಕುರಿ, ಕೋಳಿಗಳನ್ನು ಜೂಜಿಗಿಟ್ಟಿದ್ದಾರೆ.

ಬೆಟ್ಟಿಂಗ್‌ನ ಈ ಅಬ್ಬರದಿಂದ ಗ್ರಾಮಾಂತರ ಭಾಗದಲ್ಲಿ ಚುನಾವಣೆ ಕಣ ರಂಗೇರಿದೆ.  ಮೈಸೂರು ಗ್ರಾಮಾಂತರ ಭಾಗದ‍ಲ್ಲೂ ಬೆಟ್ಟಿಂಗ್ ಭರಾಟೆ ಜೋರಾಗಿದೆ.

ಬಿಜೆಪಿ- ಕಾಂಗ್ರೆಸ್‌ ಹಾಗೂ ಪಕ್ಷೇತರ ಅಭ್ಯರ್ಥಿ ಪರ ಬೆಟ್ಟಿಂಗ್‌ ಜೋರಾಗಿ ನಡೆದಿದೆ.

‘ಯಾರು ಗೆಲ್ಲುತ್ತಾರೆ?’ ಎಂಬುದರ ಮೇಲೆ ಕೆಲವರು ಲಕ್ಷ ರೂಪಾಯಿವರೆಗೂ ಬೆಟ್ಟಿಂಗ್‌ ಕಟ್ಟಿದ್ದಾರೆ. ಅಂದಾಜು ₹3 ಕೋಟಿಯಷ್ಟು ಬೆಟ್ಟಿಂಗ್‌ ನಡೆದಿರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

‘ಪ್ರತಿಯೊಬ್ಬರೂ ₹ 10,000ದಿಂದ ₹ 1 ಲಕ್ಷ ರೂಪಾಯಿಗಳವರೆಗೆ ಬೆಟ್ಟಿಂಗ್‌ಗೆ ಮುಂದಾಗಿದ್ದಾರೆ. ಯಾರು ಗೆಲ್ಲಬಹುದು ಎಂಬ ಚರ್ಚೆ ಅಂತಿಮವಾಗಿ ಬೆಟ್ಟಿಂಗ್ ಹಂತಕ್ಕೆ ಬಂದು ನಿಲ್ಲುತ್ತಿದೆ.