Thursday, October 15, 2026

Dasara Wishes

Happy Dasara
Home Front Page ಬಿಡದಿ ಟೌನ್ ಶಿಪ್ ಸರ್ವೇಗೆ ಬಂದಿದ್ದ ಅಧಿಕಾರಿಗಳ ಮೇಲೆ ಹಲ್ಲೆ ವಿಚಾರ: ರೈತರಿಗೆ ಕೇಂದ್ರ ಸಚಿವ...

ಬಿಡದಿ ಟೌನ್ ಶಿಪ್ ಸರ್ವೇಗೆ ಬಂದಿದ್ದ ಅಧಿಕಾರಿಗಳ ಮೇಲೆ ಹಲ್ಲೆ ವಿಚಾರ: ರೈತರಿಗೆ ಕೇಂದ್ರ ಸಚಿವ HDK ಸಂದೇಶ

ಸಿದ್ದರಾಮಯ್ಯ ವಿರುದ್ದದ ಸ್ಟಿಂಗ್‌ ಸಂಚಿನಲ್ಲಿ ಶಾಮೀಲಾದ ʼನೀಲಿಕಣ್ಣಿನ ಮಂತ್ರಿʼ- ಹೆಚ್.ಡಿಕೆ ವಾಗ್ದಾಳಿ

ಬೆಂಗಳೂರು,ಜುಲೈ,13,2026 (www.justkannada.in): ರಾಮನಗರದ ಬಿಡದಿಯ ಟೌನ್ ಶಿಪ್ ವಿರುದ್ದ ರೈತರ ಆಕ್ರೋಶದ ಕಿಚ್ಚು ಮತ್ತಷ್ಟು ಹೆಚ್ಚಾಗಿದ್ದು ಇಂದು ಸರ್ವೇ ಮಾಡಲು ಬಂದಿದ್ದ ಅಧಿಕಾರಿಗಳಿಗೆ ಮಹಿಳೆಯರು ಪೊರಕೆ ಸೇವೆ ಮಾಡಿ ಕಾರುಗಳಿಗೆ ಕಲ್ಲು ಇಟ್ಟಿಗೆಯಿಂದ ದಾಳಿ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ  ರೈತರಿಗೆ ವಿಡಿಯೋ ಸಂದೇಶದಲ್ಲಿ ಮನವಿಯೊಂದನ್ನ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ರೈತರು ಶಾಂತಿಯುತವಾಗಿ ಹೋರಾಟ ಮಾಡಿ ಎಂದು ಸಂದೇಶ ನೀಡಿದ್ದಾರೆ.

ಅಧಿಕಾರಿಗಳು ಏಕಾಏಕಿ ಈ ಸರ್ವೆಕಾರ್ಯಕ್ಕೆ ಬಂದಿದ್ದಾರೆ.  ಇದಕ್ಕೆ ರಾಜ್ಯ ಸರ್ಕಾರದ ಚಿತಾವಣೆಯೇ ಕಾರಣ. ರಾಜ್ಯ ಸರ್ಕಾರ ಪೊಲೀಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ.. ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡಬಾರದು. ಎಲ್ಲರೂ ಶಾಂತಿಯುತವಾಗಿ  ಹೋರಾಟ ಮಾಡಿ ಎಂದು ತಿಳಿಸಿದ್ದಾರೆ.ಬಿಡದಿ ಟೌನ್ ಶಿಪ್ ಸರ್ವೇಗೆ ಬಂದಿದ್ದ ಅಧಿಕಾರಿಗಳ ಮೇಲೆ ಹಲ್ಲೆ ವಿಚಾರ jk02_new jk02 new

Key words: Attack, Bidadi Township,  survey, Union Minister, HDK, farmers