Friday, October 16, 2026

Dasara Wishes

Happy Dasara
Home Front Page ಬಿಜೆಪಿ ಜೊತೆಗೂಡಿ ಮತ್ತೆ ವಿಧಾನಸೌಧಕ್ಕೆ ಬರಲು ಪ್ರಯತ್ನಿಸುತ್ತೇವೆ-ಕೇಂದ್ರ ಸಚಿವ HDK

ಬಿಜೆಪಿ ಜೊತೆಗೂಡಿ ಮತ್ತೆ ವಿಧಾನಸೌಧಕ್ಕೆ ಬರಲು ಪ್ರಯತ್ನಿಸುತ್ತೇವೆ-ಕೇಂದ್ರ ಸಚಿವ HDK

ಸಿಜೆಪಿಗೆ ಫಂಡ್‌ ಮಾಡುತ್ತಿರುವುದು ಕಾಂಗ್ರೆಸ್:‌ ರಜ್ಯದ ಹಣ ಲೂಟಿ ಮಾಡಿ ದೆಹಲಿಗೆ ಸಾಗಾಟ-ಕೇಂದ್ರ ಸಚಿವ ಹೆಚ್‌ ಡಿಕೆ

ಬೆಂಗಳೂರು,ಏಪ್ರಿಲ್,13,2026 (www.justkannada.in): ವಿಧಾನಸೌಧಕ್ಕೆ ತಮ್ಮ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ, ಅಧಿಕಾರಿಗಳ ಸಭೆ ಹಿನ್ನೆಲೆ ಬಂದಿದ್ದೇನೆ ಎಂದರು.

ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಕೈಗಾರಿಕೆ ಸಂಬಂಧ ಹಲವು ಅಧಿಕಾರಿಗಳ ಸಭೆ ಕರೆದಿದ್ದಾರೆ. ಹೀಗಾಗಿ ಎರಡು ವರ್ಷಗಳ ನಂತರ ವಿಧಾನಸೌಧಕ್ಕೆ ಬಂದಿದ್ದೇನೆ ರಾಜ್ಯದಲ್ಲಿ ಕೆಲ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಕೆಲ ನಿರೀಕ್ಷೆಗಳಿವೆ  ಎಂದರು.

ಮುಂದೆ ವಿಧಾನಸೌಧಕ್ಕೆ ಬರ್ತೀರಾ ಎಂದು ಪ್ರಶ್ನೆಗೆ ಉತ್ತರಿಸಿದ ಹೆಚ್.ಡಿ ಕುಮಾರಸ್ವಾಮಿ, ಅದೆವಲ್ಲವನ್ನೂ ಭಗವಂತ ನಿಗದಿ ಮಾಡುತ್ತಾನೆ. ಜನರ ಆಶೀರ್ವಾದ ಭಗವಂತ ಅದನ್ನೆಲ್ಲಾ ನಿರ್ಧಾರ ಮಾಡುತ್ತಾನೆ. ಬಿಜೆಪಿ ಜೊತೆಗೂಡಿ ವಿಧಾಸೌಧಕ್ಕೆ ಮತ್ತೆ ಬರಲು ಪ್ರಯತ್ನಿಸುತ್ತೇವೆ ಎಂದರು.

Key words: Vidhana Soudha, Union Minister, HD Kumaraswamy