ನಟಿ ಸಂಯುಕ್ತ ಹೆಗ್ಡೆ ಮೇಲೆ ನಡೆದ ನೈತಿಕ  ಪೊಲೀಸ್ ಗಿರಿ ಘಟನೆ ದುರದೃಷ್ಟಕರ: ಕಾನೂನು ಕ್ರಮಕ್ಕೆ ‘ಫೈರ್’ ಆಗ್ರಹ

ಬೆಂಗಳೂರು,ಸೆಪ್ಟಂಬರ್,8,2020(www.justkannada.in): ಕಳೆದ ಎರಡು ದಿನಗಳ ಹಿಂದೆ ಸಾರ್ವಜನಿಕರು ವಾಕಿಂಗ್‌ ಮಾಡುವ ಪಾರ್ಕ್‌ನಲ್ಲಿ ನಟಿ ಸಂಯುಕ್ತ ಹೆಗ್ಡೆ ಮತ್ತವರ ಸಂಗಡಿಗರು ತುಂಡು ಹುಲಾ ಹೂಪ್‌ ಡ್ಯಾನ್ಸ್ ಮಾಡಿದ್ದು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸ್ಥಳೀಯರು ನಟಿ ಸಂಯುಕ್ತ ಹೆಗ್ಡೆ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂತಿತ್ತು.jk-logo-justkannada-logo

ಈ ಸಂಬಂಧ ನಟಿ ಸಂಯುಕ್ತ ಹೆಗ್ಡೆ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಖಂಡಿಸಿರುವ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ & ಇಕ್ವಾ ಲಿಟಿ (ಫೈರ್),  ನಮ್ಮ  ಸಹೋದ್ಯೋಗಿ  ನಟಿ  ಸಂಯುಕ್ತ ಹೆಗ್ಡೆ ಅವರ ಮೇಲೆ  ನಡೆದಂತಹ ನೈತಿಕ  ಪೊಲೀಸ್ ಗಿರಿಯಂತಹ ದುರದೃಷ್ಟಕರ ಘಟನೆಯನ್ನ FIRE ನ  ಸದಸ್ಯರಾದ ನಾವು ಖಂಡಿಸುತ್ತೇವೆ. ಸೆಪ್ಟಂಬರ್ 4, 2020 ಶುಕ್ರವಾರದಂದು ಹಗಲು  ಹೊತ್ತಿನಲ್ಲೇ ಬೆಂಗಳೂರಿನ  ಉದ್ಯಾನವನದಲ್ಲಿ ಉಡುಪಿನ ಆಧಾರದ ಮೇಲೆ  ನಮ್ಮ  ಸಹೋದ್ಯೋಗಿ  ನಟಿ  ಸಂಯುಕ್ತ ಹೆಗ್ಡೆ ಅವರ ಮೇಲೆ ನೈತಿಕ  ಪೊಲೀಸ್ ಗಿರಿಯಂತಹ ದುರದೃಷ್ಟಕರ  ಘಟನೆ  ನಡೆದಿದೆ.

ನಮ್ಮ  ರಾಜ್ಯ ಮತ್ತು ರಾಷ್ಟ್ರದ ಎಲ್ಲಾ ನಿವಾಸಿಗಳಿಗೂ  ಸಾಂವಿಧಾನಿಕ ಸ್ವಾತಂತ್ರವನ್ನು  ಕಾಪಾಡಿಕೊಳ್ಳಬೇಕು. ಮತ್ತು ಯಾವುದೇ ಬಹಿರಂಗ  ಉಲ್ಲಂಘನೆಗಳನ್ನು  ವ್ಯಾಖ್ಯಾನಿಸಲಾದ  ಕಾನೂನು ಚೌಕಟ್ಟಿನ ಮೂಲಕ ಮಾತ್ರ ಹೊಣೆಗಾರರನ್ನಾಗಿ ಮಾಡಬೇಕು  ವಿನಃ ಈ  ರೀತಿ ಗುಂಪುದಾಳಿ ಮತ್ತು  ಹಿಂಸಾಚಾರವಲ್ಲ ಎಂದು ಫೈರ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಗೆಯೇ ಚಲನಚಿತ್ರೋದ್ಯಮ ಮಹಿಳೆಯರ ಮೇಲಿನ ವದಂತಿಗಳು ಕೆಸರೆರಚಾಟ ಮತ್ತು ವೈಯಕ್ತಿಕ ದಾಳಿಯ ಆಧಾರದ ಮೇಲೆ ಸಮಸ್ಯೆಗಳ ಪ್ರಸ್ತುತ ಸಂವೇದನೆಯ ಬಗ್ಗೆ ಫೈರ್ ನಿರಾಶೆ ವ್ಯಕ್ತಪಡಿಸುತ್ತದೆ. ನೈತಿಕ ಪೊಲೀಸ್ ಗಿರಿ ಮತ್ತು ಮಹಿಳೆಯರ ಮೇಲಿನ ಹಲ್ಲೆಯಂತಹ ಯಾವುದೇ ಪ್ರಯತ್ನಗಳಾಗಲಿ ಅಂತವಹರಿಗೆ ಕಾನೂನಿನ ಪೂರ್ಣ ಪ್ರಮಾಣದ ಶಿಕ್ಷೆಯಾಗಲಿ  ಎಂದು ಫಿಲ್ಮಂ ಇಂಡಸ್ಟ್ರಿ ಫಾರ್ ರೈಟ್ಸ್ & ಇಕ್ವಾಲಿಟಿ(ಫೈರ್ ) ಆಗ್ರಹಿಸಿದೆ.unfortunate-moral-police-incident-actress-sanyukta-hegde-hedge-fire

ಸೆಪ್ಟಂಬರ್ 4 ರಂದು ಬೆಂಗಳೂರಿನ ಉದ್ಯಾನವನವೊಂದರಲ್ಲಿ ವರ್ಕೌಟ್‌ ಮಾಡುತ್ತಿದ್ದ ಸಂಯುಕ್ತಾ ಅವರು ಸರಿಯಾಗಿ ಬಟ್ಟೆ ಧರಿಸಿರಲಿಲ್ಲ ಎಂದು ಆರೋಪಿಸಿ ಮಹಿಳೆಯೊಬ್ಬರು ಹಲ್ಲೆಗೆ ಮುಂದಾಗಿದ್ದರು. ಆ ಘಟನೆಯನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡ ಸಂಯುಕ್ತಾ ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಅದನ್ನು ಕಂಡು ಅನೇಕ ಸೆಲೆಬ್ರಿಟಿಗಳು ಆತಂಕ ವ್ಯಕ್ತಪಡಿಸಿದ್ದು,  ಸಾರ್ವಜನಿಕವಾಗಿ ಈ ರೀತಿ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

Key words: unfortunate – moral police- incident – actress  -sanyukta hegde hedge-Fire