ದಸರಾ ಉನ್ನತ ಮಟ್ಟದ ಸಮಿತಿ ಸಭೆ ಆರಂಭ: ಸರಳ, ಸಾಂಪ್ರದಾಯಿಕ ದಸರಾ ಆಯೋಜನೆಗೆ  ಶಾಸಕ ರಾಮದಾಸ್ ಸಲಹೆ….

ಬೆಂಗಳೂರು,ಸೆಪ್ಟಂಬರ್,8,2020(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ನಡೆಸಲಾಗುತ್ತಿರುವ ದಸರಾ ಉನ್ನತ ಮಟ್ಟದ ಸಮಿತಿ ಸಭೆ ಆರಂಭವಾಗಿದೆ.Dasara-high-level committee -meeting –begins-MLA- Ramdas- advises-simple-traditional -dasara

ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ದಸರಾ ಉನ್ನತ ಮಟ್ಟದ ಸಮಿತಿ ಸಭೆ ನಡೆಯುತ್ತಿದ್ದು ಮೈಸೂರು ಭಾಗದ ಜನಪ್ರತಿನಿಧಿಗಳು ಭಾಗಿಯಾಗಿದ್ದಾರೆ. ಇನ್ನು ಶಾಸಕ ಎಸ್ ಎ ರಾಮದಾಸ್ ಅವರು ಸರಳ, ಸಾಂಪ್ರದಾಯಿಕ ದಸರಾ ಆಯೋಜನೆ ಮಾಡುವಂತೆ ಸಿಎಂ ಬಿಎಸ್ ಯಡಿಯೂರಪ್ಪಗೆ ಪತ್ರ ಬರೆದು ಸಲಹೆ ನೀಡಿದ್ದಾರೆ.Dasara-high-level committee -meeting –begins-MLA- Ramdas- advises-simple-traditional -dasara

ಸಿಎಂ ಬಿಎಸ್ ಯಡಿಯೂರಪ್ಪಗೆ ನಾಲ್ಕು ಪುಟಗಳ ಸಲಹಾ ಪಟ್ಟಿ ಸಲ್ಲಿಕೆ ಮಾಡಿರುವ ಶಾಸಕ ರಾಮದಾಸ್,  ಐದು ಆನೆ ತರಿಸಿ, ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂ ಸವಾರಿ ನಡೆಸಿ. ಯುವ ದಸರಾ, ಯುವ ಸಂಭ್ರಮ, ಕ್ರೀಡಾಕೂಟ, ಮಹಿಳಾ ಮತ್ತು ಮಕ್ಕಳ ದಸರಾ ನಿಲ್ಲಿಸುವಂತೆ ಸಲಹೆ ನೀಡಿದ್ದಾರೆ.

Key words: Dasara-high-level committee -meeting –begins-MLA- Ramdas- advises-simple-traditional -dasara