ಅಂಡರ್ 19 ವಿಶ್ವಕಪ್ ಕ್ರಿಕೆಟ್: ಸೆಮಿ ಫೈನಲ್ಸ್’ನಲ್ಲಿ ಭಾರತ-ಪಾಕಿಸ್ತಾನ ಸೆಣೆಸಾಟ ಇಂದು

ಪೊಚೆಫ್ ಸ್ಟ್ರೂಮ್, ಫೆಬ್ರವರಿ 04, 2020 (www.justkannada.in): ಅಂಡರ್ 19 ವಿಶ್ವಕಪ್ ಕೂಟದ ಸೆಮಿಫೈನಲ್ ಗೇರಿರುವ ಭಾರತ ತಂಡ ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಾಡಲಿದೆ.

ಹಾಲಿ ಚಾಂಪಿಯನ್ ಭಾರತಕ್ಕೆ ಇದು ಕಠಿಣ ಸವಾಲಾಗಲಿದೆ. ಮೇಲ್ನೋಟಕ್ಕೆ ಪ್ರಿಯಂ ಗಾರ್ಗ್ ನೇತೃತ್ವದ ಭಾರತ ತಂಡವೇ ಹೆಚ್ಚು ಬಲಿಷ್ಠವಾಗಿದೆ. ಹಾಗಿದ್ದರೂ ಇದುವರೆಗೆ ಅಂಡರ್ 19 ವಿಶ್ವಕಪ್ ಕೂಟದಲ್ಲಿ ಎರಡೂ ತಂಡಗಳು ಮುಖಾಮುಖಿಯಾದ ಸಂದರ್ಭದಲ್ಲಿ ಪಾಕಿಸ್ತಾನ ಒಟ್ಟು ಐದು ಬಾರಿ ಗೆಲುವು ಕಂಡಿದೆ.

ಆದರೆ ಎರಡು ವರ್ಷಗಳ ಹಿಂದೆ ಇದೇ ರೀತಿ ಸೆಮಿಫೈನಲ್ ನಲ್ಲಿ ಪಾಕಿಸ್ತಾನವನ್ನು ಭಾರತ 203 ರನ್ ಗಳಿಂದ ಭರ್ಜರಿಯಾಗಿ ಸೋಲಿಸಿತ್ತು. ಹೀಗಾಗಿ ಅದೇ ಆತ್ಮವಿಶ್ವಾಸದೊಂದಿಗೆ ಇಂದೂ ಭಾರತ ಕಣಕ್ಕಿಳಿಯಲಿದೆ. ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.