ಮಡಿಕೇರಿಯಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದ್ರೆ ಹೆಣ ಬೀಳುತ್ತೆ ಎಂದ ನಟ ಜಗ್ಗೇಶ್ ವಿರುದ್ಧ ಎಂ.ಬಿ ಪಾಟೀಲ್ ವಾಗ್ದಾಳಿ.

Promotion

ಬೆಂಗಳೂರು,ಆಗಸ್ಟ್,23,2022(www.justkannada.in): ಮಡಿಕೇರಿಯಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದ್ರೆ ಹೆಣ ಬೀಳುತ್ತೆ ಎಂದ ನಟ ಹಾಗೂ ರಾಜ್ಯಸಭೆ ಸದಸ್ಯ ಜಗ್ಗೇಶ್ ವಿರುದ್ಧ  ಕೆಪಿಸಿಸಿ ಪ್ರಚಾತ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಮಾಜಿ ಸಚಿವ ಎಂ.ಬಿ ಪಾಟೀಲ್, ಯಾರ ಹೆಣ ಬೀಳುಯತ್ತೆ ಅಮಾಯಕರ ಹೆಣ ಬೀಳುತ್ತಾ..?  ಜಗ್ಗೇಶ್  ರಾಜ್ಯಸಭಾ ಸದಸ್ಯ ಆಗಲು ಯೋಗ್ಯರಲ್ಲ ಅಯೋಗ್ಯ. . ಜಗ್ಗೇಶ್ ಗೆ ಕಾನೂನು ಸುವ್ಯವಸ್ಥೆ ಬಗ್ಗೆ ಅರಿವಿಲ್ಲ.   ಜಗ್ಗೇಶ್ ಮತ್ತು ಪ್ರತಾಪ್ ಸಿಂಹ ಉಡಾಫೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಪ್ರಜಾಪ್ರಭುತ್ವದಲ್ಲಿ ಸಂವಿಧಾನದಲ್ಲಿ ಸಿದ್ದರಾಮಯ್ಯ ನಂಬಿಕೆ ಇಟ್ಟಿದ್ದಾರೆ. ಸಿದ್ದರಾಮಯ್ಯ ಬೆರಳು ತೋರಿದ್ರೆ ಬಿಜೆಪಿಗರು ಹೊರಬರಲಾಗಲ್ಲ.  ಸಿದ್ದರಾಮಯ್ಯ ಸೂಚಿಸಿದರೆ ಇರುವ ಹೊರಬರಲಾಗಲ್ಲ. ಆದರೆ ಸಿದ್ದರಾಮಯ್ಯ ಅಂಥ ಕೆಲಸ ಮಾಡಲ್ಲ.  ಸಿದ್ದರಾಮಯ್ಯ ಕರ್ನಾಟಕದ ದೊಡ್ಡ ಶಕ್ತಿ ಎಂದರು.

Key words: congress leader-MB Patil -actor -Jaggesh –Madikeri