ಸಾವರ್ಕರ್ ಹಾಗೂ  ಜಿನ್ನಾರದ್ದು, ದ್ವಿ-ರಾಷ್ಟ್ರ ನೀತಿ: ಡಾ.ಬಿ.ಆರ್ ಅಂಬೇಡ್ಕರ್ ಹೇಳಿಕೆ ಪೋಸ್ಟ್ ಹಾಕಿದ  ಯತಿಂದ್ರ ಸಿದ್ಧರಾಮಯ್ಯ.

ಮೈಸೂರು,ಆಗಸ್ಟ್,23,2022(www.justkannada.in): ಸ್ವಾತಂತ್ರ್ಯ ಹೋರಾಟದ ವಿಚಾರದಲ್ಲಿ  ಸಾವರ್ಕರ್ ಹೆಸರು ಬಳಕೆ ವಿಚಾರದಲ್ಲಿ ಸಾವರ್ಕರ್, ಮಹಮ್ಮದ್ ಆಲಿ ಜಿನ್ನಾ ಬಗ್ಗೆ ಸಂವಿಧಾನ ಶಿಲ್ಪಿ  ಡಾ. ಬಿ ಆರ್ ಅಂಬೇಡ್ಕರ್ ಹೇಳಿಕೆಯೊಂದನ್ನ ಕಾಂಗ್ರೆಸ್ ಶಾಸಕ ಯತೀಂದ್ರ ಸಿದ್ಧರಾಮಯ್ಯ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಬಿಜೆಪಿಗೆ ಟಾಂಗ್ ನೀಡಿ್ದಾರೆ.

ಡಾ. ಬಿ ಆರ್ ಅಂಬೇಡ್ಕರ್ ಹೇಳಿಕೆಯ ಪೋಸ್ಟ್ ಹಾಕಿದ ಶಾಸಕ ಡಾ. ಯತಿಂದ್ರ ಸಿದ್ದರಾಮಯ್ಯ. ಸಾವರ್ಕರ್ ಹಾಗು ಜಿನ್ನಾರದ್ದು, ದ್ವಿ-ರಾಷ್ಟ್ರ ನೀತಿ. ದ್ವಿ-ರಾಷ್ಟ್ರ ವಿಷಯದಲ್ಲಿ ಒಂದೇ ದೃಷ್ಟಿಕೋನ ಎಂದು ಅಂಬೇಡ್ಕರ್ ಹೇಳಿದ್ದರು. ಧರ್ಮದ ರಾಜಕಾರಣ ಮಾಡಿದ  ಹಿಂದೂ ಮಹಾಸಭಾ ಹಾಗು  ಮುಸ್ಲಿಂ ಲೀಗ್ ಒಂದೇ ನಾಣ್ಯದ ಎರಡು ಮುಖಗಳು ಎಂದು ಟ್ವೀಟ್ ಮಾಡಿದ್ದಾರೆ.

ಸಾವರ್ಕರ್ ಬ್ಯಾನರ್ ವಿವಾದ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದ್ದು  ಬಿಜೆಪಿ ಸಾವರ್ಕರ್ ಸ್ವಾತಂತ್ರ ಹೋರಾಟಗಾರನೆಂದರೇ ಸಾವರ್ಕರ್ ಸ್ವಾತಂತ್ರ ಹೋರಾಟಗಾರನಲ್ಲ ಎಂಬುದು ಕಾಂಗ್ರೆಸ್  ವಾದವಾಗಿದೆ.

Key words: Savarkar – Jinna  Two-nation- policy- Dr. BR Ambedkar’s- statement-Yatindra Siddaramaiah.