‘ಮೆಣಸಿನಕಾಯಿ’ ಕಳ್ಳ ಅಂದರ್: 1.60 ಲಕ್ಷ ನಗದು ವಶ….

Promotion

ಮೈಸೂರು,ಮೇ,4,2019(www.justkannada.in): ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಲಕ್ಷಾಂತರ ಮೌಲ್ಯದ ಮೆಣಸಿನಕಾಯಿಯನ್ನ ಕದ್ದು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ಗ್ರಾಮಾಂತರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಅಮ್ಜದ್ ಪಾಷಾ(31) ಬಂಧಿತ ಆರೋಪಿ. ಈತ ನಗರದ ಎಪಿಎಂಸಿ ಯಾರ್ಡ್ ನ ರಂಗನಾಥ ಟ್ರೇಡರ್ಸ್ ನಲ್ಲಿ ಕೆಲಸ ಮಾಡುತ್ತಿದ್ದನು. ಈ ನಡುವೆ ಅಮ್ಜದ್ ಪಾಷ ಕಳೆದ 5 ತಿಂಗಳಿಂದ ಪ್ರತಿದಿನ ಮೆಣಸಿನಕಾಯಿ ಮೂಟೆಗಳನ್ನ ಕದ್ದು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಇದೀಗ  ಅಮ್ಜದ್ ಕಳುವು ಮಾಡುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.

ಪೊಲೀಸರು ಈತನನ್ನ ಬಂಧಿಸಿದ್ದು ಬಂಧಿತನಿಂದ 1 ಲಕ್ಷ 60 ಸಾವಿರ ನಗದು ಹಾಗೂ 10 ಸಾವಿರ ಮೌಲ್ಯದ ಮೆಣಸಿನಕಾಯಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Chilli- thief –arrest- 1.60 lakh- cash- seized.