Sunday, August 23, 2026

BDA Apartments

Home Front Page ನಾಗರಿಕರ ಪ್ರಾಣ ರಕ್ಷಿಸಲು ಯುದ್ದ ನಿಲ್ಲುವುದು ಅತ್ಯಗತ್ಯ – ಕದನವಿರಾಮ ಘೋಷಣೆಗೆ ವಿಶ್ವಸಂಸ್ಥೆ ಸ್ವಾಗತ

ನಾಗರಿಕರ ಪ್ರಾಣ ರಕ್ಷಿಸಲು ಯುದ್ದ ನಿಲ್ಲುವುದು ಅತ್ಯಗತ್ಯ – ಕದನವಿರಾಮ ಘೋಷಣೆಗೆ ವಿಶ್ವಸಂಸ್ಥೆ ಸ್ವಾಗತ

ವಾಷಿಂಗ್‍ ಟನ್,ಏಪ್ರಿಲ್,8,2026 (www.justkannada.in):  ಇರಾನ್ ಮತ್ತು  ಅಮೆರಿಕ ನಡುವೆ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿದ್ದು ಇದನ್ನು ವಿಶ್ವಸಂಸ್ಥೆ ಸ್ವಾಗತಿಸಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೊನಿಯೋ ಗುಟೆರೆಸ್,  ಎಲ್ಲಾ ದೇಶಗಳು ಒಪ್ಪಂದದ ಷರತ್ತುಗಳಿಗೆ ಬದ್ದರಾಗಿರಲು ಕರೆ ನೀಡಿದ್ದಾರೆ.  ಪ್ರಾದೇಶಿಕ ಶಾಂತಿ ನೆಮ್ಮದಿಗೆ ಕದನ ವಿರಾಮ ನಾಂದಿಯಾಗಲಿ ಎಂದಿದ್ದಾರೆ.

ಅಂತರಾಷ್ಟ್ರೀಯ ಕಾನೂನು ಜವಾಬ್ದಾರಿ ಪಾಲಿಸುವಂತೆ ಸೂಚನೆ ನೀಡಿದ್ದು,  ನಾಗರಿಕರ ಪ್ರಾಣ ರಕ್ಷಿಸಲು ಯುದ್ದ ನಿಲ್ಲುವುದು ಅಗತ್ಯ.  ಮಾನವೀಯ ಸಂಕಷ್ಟ ಕಡಿಮೆ ಮಾಡಲು ಹಗೆತನ ಬಿಡುವಂತೆ ಮನವಿ ಮಾಡಿದ್ದಾರೆ.    ಕದನ ವಿರಾಮವು ಶಾಶ್ವತ ಸಮಗ್ರ ಶಾಂತಿಗೆ ದಾರಿಯಾಗಲಿ ಎಂಬುದು ಆಶಯ ಎಂದು ಅಂಟೊನಿಯೋ ಗುಟೆರೆಸ್ ತಿಳಿಸಿದ್ದಾರೆ.

Key words: UN, welcomes, Iran, America, ceasefire announcement