Sunday, August 23, 2026

BDA Apartments

Home Front Page ಹೊರ್ಮುಜ್ ಜಲಸಂಧಿ ಮುಕ್ತಕ್ಕೆ ಒಪ್ಪಿಗೆ: ಇರಾನ್ ಮೇಲೆ ದಾಳಿ ಮಾಡಲ್ಲ- ಡೊನಾಲ್ಡ್ ಟ್ರಂಪ್

ಹೊರ್ಮುಜ್ ಜಲಸಂಧಿ ಮುಕ್ತಕ್ಕೆ ಒಪ್ಪಿಗೆ: ಇರಾನ್ ಮೇಲೆ ದಾಳಿ ಮಾಡಲ್ಲ- ಡೊನಾಲ್ಡ್ ಟ್ರಂಪ್

ವಾಷಿಂಗ್ ಟನ್,ಏಪ್ರಿಲ್,8,2026 (www.justkannada.in):  ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿದ್ದ ಸಂಘರ್ಷಕ್ಕೆ ಸ್ವಲ್ಪ ದಿನಗಳ ಕಾಲ ಬ್ರೇಕ್ ಬಿದ್ದಿದ್ದು ಇದೀಗ ಇರಾನ್ ಮತ್ತು ಅಮೆರಿಕಾ ನಡುವೆ ಎರಡು ವಾರಗಳ ಕಾಲ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿದೆ.

ಈ ಕುರಿತು ಟ್ವಿಟ್ ಮಾಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಇರಾನ್‌ ಒಪ್ಪಿಕೊಂಡಿದೆ ಮತ್ತು ಅವರ ಕಡೆಯಿಂದ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆ. ಇರಾನ್ ಮೇಲೆ ಎರಡು ವಾರಗಳ ಕಾಲ ದಾಳಿ ಮಾಡಲ್ಲ ಎಂದಿದ್ದಾರೆ.

ವಿಶ್ವಶಾಂತಿಗೆ  ಇದೊಂದು ಮಹತ್ವದ ದಿನ. ಇರಾನ್ ಅಮೆರಿಕಾ ನಡುವೆ ಹಲವು ವಿಚಾರಗಳ ಒಪ್ಪಂದವಾಗಿದೆ. ಹೊರ್ಮುಜ್ ಜಲಸಂಧಿ ಮುಕ್ತ ಮಾಡಲು ಇರಾನ್ ಒಪ್ಪಿಗೆ ನೀಡಿದೆ. 2 ವಾರಗಳ ಕಾಲ ಕದನ ವಿರಾಮಕ್ಕೆ 2 ಕಡೆಯಿಂದ ಒಪ್ಪಿಗೆ ಇದೆ.  ಇರಾನ್ ಕಾರ್ಯಚರಣೆಯಲ್ಲಿ ನಮ್ಮ ಉದ್ದೇಶ ಈಡೇರಿದೆ  2 ವಾರಗಳಲ್ಲಿ ಕದನ ವಿರಾಮ ಅಂತಿಮವಾಗಲಿದೆ ಎಂದಿದ್ದಾರೆ.

Key words: Donald Trump, No attack, Iran