ಏಕಕಾಲದಲ್ಲಿ ಎರಡು ಅಥವಾ ಹೆಚ್ಚು ಪದವಿ ಪಡೆಯುವ ಸಾಧ್ಯತೆ ಬಗ್ಗೆ ಪರಿಶೀಲನೆ: ಯುಜಿಸಿಯಿಂದ ಸಮಿತಿ ರಚನೆ

ನವದೆಹಲಿ:ಜುಲೈ-22:(www.justkannada.in) ವಿದ್ಯಾರ್ಥಿಗಳಿಗೊಂದು ಸಿಹಿ ಸುದ್ದಿ. ವಿದ್ಯಾರ್ಥಿಗಳು ಶೀಘ್ರದಲ್ಲಿಯೇ ವಿವಿಧ ವಿಶ್ವವಿದ್ಯಾಲಯಗಳಿಂದ ಅಥವಾ ಒಂದೇ ವಿಶ್ವವಿದ್ಯಾನಿಲಯದಿಂದ ಏಕಕಾಲದಲ್ಲಿ ಹಲವು ಪದವಿಗಳನ್ನು ಪಡೆಯಲು ಸಾಧ್ಯವಾಗುವಂತಹ ಯೋಜನೆಯನ್ನು ಜಾರಿಗೆ ತರಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಚಿಂತನೆ ನಡೆಸಿದೆ.

ಯುಜಿಸಿ ಉಪಾಧ್ಯಕ್ಷ ಭೂಷಣ್ ಪಟ್ವರ್ಧನ್ ನೇತೃತ್ವದಲ್ಲಿ ಒಂದೇ ವಿಶ್ವವಿದ್ಯಾಲಯ ಅಥವಾ ವಿವಿಧ ವಿಶ್ವವಿದ್ಯಾಲಯಗಳಿಂದ ಏಕಕಾಲದಲ್ಲಿ ಎರಡು ಪದವಿ ಕಾರ್ಯಕ್ರಮಗಳನ್ನು ದೂರ ಸಂಪರ್ಕ ಶಿಕ್ಷಣ, ಆನ್‌ಲೈನ್ ಮೋಡ್ ಅಥವಾ ಅರೆಕಾಲಿಕ ಮೋಡ್ ಮೂಲಕ ಅನುಸರಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲು ಒಂದು ಸಮಿತಿಯನ್ನು ರಚಿಸಿದೆ.

ಯುಜಿಸಿ ಆಯೋಗವು ಈ ವಿಚಾರವನ್ನು ಪರಿಶೀಲಿಸುತ್ತಿರುವುದು ಇದೇ ಮೊದಲಲ್ಲ. 2012 ರಲ್ಲಿ ಕೂಡ ಇದೇ ವಿಚಾರಕ್ಕೆ ಸಂಬಮ್ಧಿಸಿದಂತೆ ಒಂದು ಸಮಿತಿಯನ್ನು ರಚಿಸಿ ಸಮಾಲೋಚನೆ ನಡೆಸಿತ್ತು. ಆದರೆ ಅಂತಿಮವಾಗಿ ಈ ವಿಚಾರವನ್ನು ಕೈಬಿಡಲಾಗಿತ್ತು. ಆದರೀಗ ಮತ್ತೆ ಇದೇ ವಿಚಾರವನ್ನು ಕೈಗೆತ್ತಿಕೊಂಡಿರುವ ಯಿಜಿಸಿ, ಹೊಸ ಸಮಿತಿಯನ್ನು ಕಳೆದ ತಿಂಗಳು ರಚಿಸಿದ್ದು, ಒಂದೇ ವಿವಿ ಅಥವಾ ಬೇರೆ ಬೇರೆ ವಿವಿಗಳಲ್ಲಿ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಪದವಿ ಪಡೆಯುವ ಕುರಿತಾದ ಆಲೋಚನೆಯ ಕಾರ್ಯಸಾಧ್ಯತೆಯನ್ನು ಅನ್ವೇಷಿಸಲು ವಿವಿಧ ಶೈಕ್ಷಣಿಕ ತಜ್ನರ ಜತೆಗೂಡಿ ಸಮಾಲೋಚನೆ ನಡೆಸುತ್ತಿದೆ ಎಂದು ಯುಜಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಈ ಬಾರಿ ಈ ಯೋಜನೆ ಜಾರಿಗೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಹೈದರಾಬಾದ್ ವಿಶ್ವವಿದ್ಯಾಲಯದ ಅಂದಿನ ಉಪಕುಲಪತಿ ಫರ್ಕಾನ್ ಕಮರ್ ನೇತೃತ್ವದ 2012 ರ ಸಮಿತಿಯು ನಿಯಮಿತ ಕ್ರಮದಲ್ಲಿ ಪದವಿ ಕಾರ್ಯಕ್ರಮಕ್ಕೆ ದಾಖಲಾದ ವಿದ್ಯಾರ್ಥಿಯನ್ನು ಏಕಕಾಲದಲ್ಲಿ ಗರಿಷ್ಠ ಅಥವಾ ಹೆಚ್ಚುವರಿ ಪದವಿ ಕಾರ್ಯಕ್ರಮವನ್ನು ಮುಕ್ತ ಅಥವಾ ದೂರ ಕ್ರಮದಲ್ಲಿ ಏಕಕಾಲದಲ್ಲಿ ಮುಂದುವರಿಸಲು ಅನುಮತಿಸಬೇಕೆಂದು ಶಿಫಾರಸು ಮಾಡಿದ್ದರು. ಆದರೆ ನಿಯಮಿತ ಕ್ರಮದ ಅಡಿಯಲ್ಲಿ ಎರಡು ಪದವಿ ಕಾರ್ಯಕ್ರಮಗಳನ್ನು ಏಕಕಾಲದಲ್ಲಿ ಅನುಮತಿ ನೀಡಲಾಗುವುದಿಲ್ಲ ಏಕೆಂದರೆ ಅದು ಆಡಳಿತಾತ್ಮಕ ಮತ್ತು ಶೈಕ್ಷಣಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೆ ನಿಯಮಿತ ಕ್ರಮದ ಅಡಿಯಲ್ಲಿ ಪದವಿ ಕಾರ್ಯಕ್ರಮವನ್ನು ಅನುಸರಿಸುವ ವಿದ್ಯಾರ್ಥಿಗೆ ಗರಿಷ್ಠ ಒಂದು ಪ್ರಮಾಣಪತ್ರ, ಡಿಪ್ಲೊಮಾ, ಅಡ್ವಾನ್ಸ್ಡ್ ಡಿಪ್ಲೊಮಾ, ಪಿಜಿ ಡಿಪ್ಲೊಮಾ ಕಾರ್ಯಕ್ರಮವು ಒಂದೇ ವಿಶ್ವವಿದ್ಯಾಲಯದಲ್ಲಿ ಅಥವಾ ಇತರ ಸಂಸ್ಥೆಗಳಿಂದ ನಿಯಮಿತ ಅಥವಾ ಮುಕ್ತ ಮತ್ತು ದೂರ ಕ್ರಮದಲ್ಲಿ ಏಕಕಾಲದಲ್ಲಿ ನೀಡಬಹುದು ಎಂದು ಸಮಿತಿಯ ವರದಿ ತಿಳಿಸಿದೆ.

ಏಕಕಾಲದಲ್ಲಿ ಎರಡು ಅಥವಾ ಹೆಚ್ಚು ಪದವಿ ಪಡೆಯುವ ಸಾಧ್ಯತೆ ಬಗ್ಗೆ ಪರಿಶೀಲನೆ: ಯುಜಿಸಿಯಿಂದ ಸಮಿತಿ ರಚನೆ
UGC may allow pursuing multiple degrees simultaneously, sets panel to revisit the idea

Students might soon be able to pursue multiple degrees simultaneously from different universities or the same university, with the University Grants Commission (UGC) studying the feasibility of the idea.