ಇಂದೇ ವಿಶ್ವಾಸಮತಯಾಚನೆ ಮುಗಿಸಿಕೊಡಿ- ವಿಧಾನಸಭೆಯಲ್ಲಿ ಸ್ಪೀಕರ್ ಗೆ ಬಿಜೆಪಿ ಮನವಿ…

ಬೆಂಗಳೂರು,ಜು,22,2019(www.justkannada.in): ಇಂದೇ ವಿಶ್ವಾಸಮತಯಾಚನೆ ಮುಗಿಸಿಕೊಡಿ ಎಂದು ವಿಧಾನಸಭೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಗೆ ಬಿಜೆಪಿ ಸದಸ್ಯರು ಮನವಿ ಮಾಡಿದರು.

ವಿಧಾನಸಭೆ ಕಲಾಪ ಆರಂಭವಾದ ಬಳಿಕ ಮಾತನಾಡಿದ ಬಿಜೆಪಿ ಸದಸ್ಯ ಮಾಧುಸ್ವಾಮಿ  ಯಾರು ಎಷ್ಟಾದ್ರೂ ಮನವಿ ಮಾಡಿಕೊಳ್ಳಲಿ. ಎಷ್ಟು ಬೇಕಾದ್ರು ಚರ್ಚೆ ಮಾಡಲಿ. ಇಂದು ವಿಶ್ವಾಸಮತಯಾಚನೆ ಮುಗಿಸಿಕೊಡಿ.  ಸಮಯದ ಬಗ್ಗೆ ನಿಮಗೆ ನಿಗಾ ಇರಲಿ. ಇಂದೇ ವಿಶ್ವಾಸಮತಯಾಚನೆ ಮುಗಿಸುವಂತೆ ಮಾಧುಸ್ವಾಮಿ ಮನವಿ ಮಾಡಿದರು.

ಇದೇ ವೇಳೆ ಮಾತನಾಡಿದ ಸೋಮವಾರ ವಿಶ್ವಾಸಮತಯಾಚನೆ ಮಾಡುವುದಾಗಿ ಹೇಳಿದ್ದರು. ಇದಕ್ಕೆ ಒಂದು ಸಮಯ ನಿಗದಿ ಮಾಡಿ ಎಂದು ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್  ಕೋರಿದರು. ಜಗದೀಶ್ ಶೆಟ್ಟರ್ ಮನವಿಗೆ ಉತ್ತರಿಸಿದ ಸ್ಪೀಕರ್  ನೀವು ಹೇಳಿರುವುದನ್ನೇ ನಾನು ಮಾರ್ಮಿಕವಾಗಿ ಹೆಳಿದ್ದೇನೆ ಎಂದರು.

Key words: Finish –today-vote of confidence- BJP – Speaker -Assembly