ಸುಪ್ರೀಂಕೋರ್ಟ್ ಆದೇಶದಿಂದ ನಮ್ಮ ಹಕ್ಕು ಉಲ್ಲಂಘನೆಯಾಗಿಲ್ಲ – ವಿಧಾನಸಭೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ…

ಬೆಂಗಳೂರು,ಜು,22,2019(www.justkannada.in):  ವಿಶ್ವಾಸಮತಯಾಚನೆ ಮೇಲಿನ ಚರ್ಚೆ ವೇಳೆ  ಸಿದ್ದರಾಮಯ್ಯ ಎತ್ತಿದ್ದ ಕ್ರಿಯಾಲೋಪಕ್ಕೆ ಸ್ಪೀಕರ್ ರಮೇಶ್ ಕುಮಾರ್ ರೂಲಿಂಗ್ ನೀಡಿದರು.

ಸಂವಿಧಾನ 10ನೇ ಪರಿಚ್ಚೇದದ ಹಕ್ಕು ಮೊಟಕು ಎಂದು ಸಿದ್ದರಾಮಯ್ಯ ಎತ್ತಿದ್ದ ಕ್ರಿಯಾಲೋಪ ಕುರಿತು ರೂಲಿಂಗ್ ನೀಡಿದ  ಸ್ಪೀಕರ್ ರಮೇಶ್ ಕುಮಾರ್, ಸಿದ್ದರಾಮಯ್ಯ. ಶಾಸಕಾಂಗ ಪಕ್ಷದ ನಾಯಕ ವಿಪ್ ನೀಡಬಹುದು, ನನ್ನ ಯಾವುದೇ ಹಕ್ಕುಗಳ ಉಲ್ಲಂಘನೆಯಾಗಿಲ್ಲ. ಸುಪ್ರೀಂ ಯಾವುದೇ  ಗೊಂದಲ ಇಲ್ಲದ ತೀರ್ಪು ನೀಡಿದೆ.   ಸುಪ್ರೀಂಕೋರ್ಟ್  ಸಭಾಧ್ಯಕ್ಷರಿಗೆ ಸಂಪೂರ್ಣ ಸ್ವಾತಂತ್ರ ನೀಡಿದೆ. ಸುಪ್ರೀಂಕೋರ್ಟ್ ಆದೇಶದಿಂದ ಹಕ್ಕು ಉಲ್ಲಂಘನೆಯಾಗಿಲ್ಲ.  ನಮ್ಮ ಯಾವುದೇ ಹಕ್ಕು ಮೊಟಕುಗೊಳಿಸಿಲ್ಲ ಎಂದು ತಿಳಿಸಿದರು.

ನನ್ನ ನಿಲುವಿನಲ್ಲಿ ಯಾವುದೇ ಅಸ್ಪಷ್ಟತೆ ಇಲ್ಲ.  ನಾನು ನನ್ನ ಜನ್ಮದಲ್ಲಿ ಪಕ್ಷಪಾತ ಮಾಡಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

Key words: not infringed – Supreme Court-order -Speaker – Ramesh Kumar