ಯುಗಾದಿ ಹಬ್ಬ ಹಿನ್ನೆಲೆ: ಕೆಎಸ್ ಟಿಡಿಸಿಯಿಂದ ವಿಶೇಷ ಬಸ್ ವ್ಯವಸ್ಥೆ….

 ಬೆಂಗಳೂರು, ಏಪ್ರಿಲ್,9,2021(www.justkannada.in): ಕೆ.ಎಸ್.ಟಿ.ಡಿ.ಸಿಯು ಯುಗಾದಿ ಹಬ್ಬದ ಪ್ರಯುಕ್ತ ರಾಜ್ಯದ ವಿವಿಧ ಪ್ರವಾಸಿ ಸ್ಥಳಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ.Illegally,Sand,carrying,Truck,Seized,arrest,driver

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಯುಗಾದಿ ಹಬ್ಬದ ಪ್ರಯುಕ್ತ ಸಾರ್ವಜನಿಕರ ಸಾರಿಗೆ ವ್ಯವಸ್ಥೆ ಒದಗಿಸುವ ಸಂಬಂಧ ಬೆಂಗಳೂರಿನ ಯಶವಂತಪುರ ಬಸ್ ನಿಲ್ದಾಣದಿಂದ ಇಂದು  ಸಂಜೆಯಿಂದ ರಾಜ್ಯದ ವಿವಿಧ ಸ್ಥಳಗಳಾದ ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಶಿವಮೊಗ್ಗ, ಮಡಿಕೇರಿ, ಬಾದಾಮಿ, ಹಂಪಿ (ಹೊಸಪೇಟೆ) ಸ್ಥಳಗಳಿಗೆ (Point to Point Operation) ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದ್ದು, ನಿಗಮದಲ್ಲಿರುವ ಸುಸ್ಸಜ್ಜಿತ ಹವಾನಿಯಂತ್ರಿತ ವಾಹನಗಳ ಮೂಲಕ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.ugadi festival-KSTDC-spacial bus-bangalore

ಈ ಸೇವೆಯ ಸದುಪಯೋಗ ಪಡೆಯಲಿಚ್ಛಿಸುವ ಸಾರ್ವಜನಿಕರು ನಿಗಮದ ಯಶವಂತಪುರ ಕೇಂದ್ರ ಕಛೇರಿಯ ಬುಕ್ಕಿಂಗ್ ಕೌಂಟರ್, ಕೆಂಪೇಗೌಡ ಬುಕ್ಕಿಂಗ್ ಕೌಂಟರ್ ಹಾಗೂ ರೆಡ್‌ ಬಸ್ ಪೋರ್ಟಲ್ ಹಾಗೂ ನಿಗಮದ ಅಧಿಕೃತ ಟ್ರಾವೆಲ್ ಏಜೆಂಟ್‌ಗಳ ಮುಖಾಂತರ ಮುಂಗಡ ಬುಕ್ಕಿಂಗ್ ಮಾಡಬಹುದಾಗಿರುತ್ತದೆ ಎಂದು ನಿಗಮದ ಅಧ್ಯಕ್ಷೆ ಶೃತಿ ಕೃಷ್ಣ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

Key words:  ugadi festival-KSTDC-spacial bus-bangalore