Type A blood converted to universal donor : ರಕ್ತದ ಗುಂಪು ಪರಿವರ್ತನೆಯಲ್ಲಿ ಮಹತ್ವದ ಸಂಶೋಧನೆ…!

 

ಮೈಸೂರು, ಜೂ.17, 2019 : (www.justkannada.in news) : ‘ಎ’ ರಕ್ತದ ಗುಂಪನ್ನು ‘ ಓ’ ನೆಗೆಟಿವ್ ರಕ್ತದ ಗುಂಪಾಗಿ ಪರಿವರ್ತಿಸುವ ಬ್ಯಾಕ್ಟೀರಿಯಾಗಳನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

O -ve ರಕ್ತದ ಗುಂಪು ಅಪರೂಪದ್ದು. ಪ್ರಪಂಚದ ಜನಸಂಖ್ಯೆಯ ಶೇ 6.6 ರಷ್ಟು ಜನರಲ್ಲಿ ಮಾತ್ರ ಇದು ಕಂಡು ಬರುತ್ತದೆ. ಆದರೆ ಈ ಗುಂಪಿನ ರಕ್ತಕ್ಕೆ ಶೇ 13 ರಷ್ಟು ಬೇಡಿಕೆಯಿದೆ.

ಈ ಸಮಸ್ಯೆಯನ್ನು ಬಗೆ ಹರಿಸಲು ಸಂಶೋಧಕರು ಸಾಮಾನ್ಯವಾಗಿ ಕಂಡು ಬರುವ ‘ ಎ ‘ ಗುಂಪಿನ ರಕ್ತವನ್ನು ‘ ಓ ‘ ನೆಗೆಟಿವ್ ಆಗಿ ಪರಿವರ್ತಿಸುವ ಪ್ರಯತ್ನದಲ್ಲಿ ಭಾಗಶಃ ಯಶಸ್ಸು ಕಂಡಿದ್ದಾರೆ. ಮನುಷ್ಯನ ಕರುಳಿನಲ್ಲಿರುವ ಎರಡು ಕಿಣ್ವಗಳು ಯಾವುದೇ ರಕ್ತದ ಗುಂಪನ್ನು ‘ ಓ’ ನೆಗೆಟಿವ್ ಆಗಿ ಪರಿವರ್ತಿಸುವ ಸಾಮರ್ಥ್ಯವುಳ್ಳವಾಗಿವೆ.

ಮನುಷ್ಯನಲ್ಲಿ ಮೂಲತಃ ನಾಲ್ಕು ಬಗೆಯ ರಕ್ತದ ಗುಂಪುಗಳಿವೆ. A, B, AB ಮತ್ತು O ಎಂದು. ಅದು ಹೊಂದಿರುವ ಪ್ರೋಟಿನ್ ಗಳ ಆಧಾರದ ಮೇಲೆ ಈ ರಕ್ತದ ಗುಂಪುಗಳನ್ನು ಹೆಸರಿಸಲಾಗಿದೆ. ತನ್ನದಲ್ಲದ ಗುಂಪಿನ ರಕ್ತದ ಕಣಗಳನ್ನು ಶತ್ರು ಎಂದು ಭಾವಿಸಿ ಅದನ್ನು ಆಂಟಿಬಾಡಿಗಳು ಕೊಲ್ಲುತ್ತವೆ. ಹಾಗಾಗಿ ರಕ್ತ ಹೆಪ್ಪುಗಟ್ಟಿ, ಬಹು ಅಂಗಾಂಗ ವೈಫಲ್ಯತೆಗೆ ಈಡು ಮಾಡುತ್ತದೆ.

ಇತ್ತೀಚಿನ ಸಂಶೋಧನೆಯಲ್ಲಿ ಮಾನವನ ಕರುಳಿನ ಒಳ ಪದರದಲ್ಲಿರುವ ಸಕ್ಕರೆ ಅಂಶವನ್ನು ತೆಗೆದು ಹಾಕುವ ಕಿಣ್ವಗಳು ಪತ್ತೆಯಾಗಿವೆ. ಈ ಕಿಣ್ವಗಳು ಎ ರಕ್ತದ ಕೋಶಗಳಲ್ಲಿರುವ ಪ್ರೋಟಿನ್ / ಸಕ್ಕರೆ ಅಂಶವನ್ನು ತೆಗೆದು ಹಾಕಿ, ಓ ನೆಗೆಟಿವ್ ಆಗಿ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗಿವೆ.
ಮುಂಬರುವ ದಿನಗಳಲ್ಲಿ ಸಾವಿರಾರು ಮಂದಿಯ ಜೀವರಕ್ಷಣೆಯಲ್ಲಿ ಈ ಸಂಶೋಧನೆ ಮಹತ್ವದ ಪಾತ್ರವಹಿಸಲಿದೆ ಎಂಬುದು ವಿಜ್ಞಾನಿಗಳ ಆಶಯವಾಗಿದೆ.

– ಕೆ.ನಟರಾಜ್
ಸಹಾಯಕ ಪ್ರಾಧ್ಯಾಪಕರು
ಮಹಾರಾಣಿ ವಿಜ್ಞಾನ ಕಾಲೇಜು
ಮೈಸೂರು.

Type A blood converted to universal donor blood with help from bacterial enzymes

researchers analyzing bacteria in the human gut have discovered that microbes there produce two enzymes that can convert the common type A into a more universally accepted type. If the process pans out, blood specialists suggest it could revolutionize blood donation and transfusion.

People typically have one of four blood types—A, B, AB, or O—defined by unusual sugar molecules on the surfaces of their red blood cells. If a person with type A receives type B blood, or vice versa, these molecules, called blood antigens, can cause the immune system to mount a deadly attack on the red blood cells. But type O cells lack these antigens, making it possible to transfuse that blood type into anyone. That makes this “universal” blood especially important in emergency rooms, where nurses and doctors may not have time to determine an accident victim’s blood type.