ಹಾಡಹಗಲೇ ಇಬ್ಬರನ್ನ ಗುಂಡಿಕ್ಕಿ ಹತ್ಯೆ: ದುಷ್ಕರ್ಮಿಗಳು ಪರಾರಿ.

ಹಾಸನ,ಜೂನ್,20,2024 (www.justkannada.in) ಹಾಡಹಗಲೇ ದುಷ್ಕರ್ಮಿಗಳು ಇಬ್ಬರನ್ನ ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಹಾಸನದ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಾಸನದ ಹೊಯ್ಸಳ ನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಆಸ್ತಿ ವಿಚಾರವಾಗಿ ದುಷ್ಕರ್ಮಿಗಳು ಇಬ್ಬರನ್ನ ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎನ್ನಲಾಗಿದೆ. ಕಾರಿನ ಬಳಿ ಒಬ್ಬರನ್ನ ಕಾರಿನ ಒಳಗೆ ಮತ್ತೊಬ್ಬರನ್ನ ಕೊಲೆ ಮಾಡಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ಕೆಆರ್ ಪುರಂ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ. ಹಾಸನ ಎಸ್ ಪಿ ಮೊಹಮ್ಮದ್ ಸುಜಿತಾ,   ಎಫ್ ಎಸ್ ಎಲ್ ತಂಡ,  ಬೆರಳಚ್ಚು ತಜ್ಞರು ಭೇಟಿ ನೀಡಿದ್ದು ಪರಿಶೀಲನೆ ನಡೆಸಲಾಗುತ್ತಿದೆ.

Key words:  Two people,  dead, firing, Hassan