ಕೊಲೆ ಮಾಡಿರುವುದು ಸತ್ಯವೇ ಆಗಿದ್ದರೇ ತಕ್ಕ ಶಿಕ್ಷೆಯಾಗಲಿ- ಮಾಜಿ ಸಚಿವ ಸಾ.ರಾ ಮಹೇಶ್

ಮೈಸೂರು,ಜೂನ್,20,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ವಿರುದ್ದ ಕಿಡಿಕಾರಿರುವ ಮಾಜಿ ಸಚಿವ ಸಾ.ರಾ ಮಹೇಶ್, ಕೊಲೆ ಮಾಡಿರುವುದು ಸತ್ಯವೇ ಆಗಿದ್ದರೆ ಅವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.

ಇಂದು ಮೈಸೂರಿನಲ್ಲಿ ಮಾತನಾಡಿದ ಶಾಸಕ ಸಾ.ರಾ ಮಹೇಶ್, ಇಂತಹ ಘಟನೆಯಿಂದ ನಾವೆಲ್ಲಾ ತಲೆ ತಗ್ಗಿಸುವಂತಾಗಿದೆ.  ನಟ ದರ್ಶನ್  ನಮ್ಮ ಜಿಲ್ಲೆಯವರು. ಸಾಕಷ್ಟು ಹೆಸರು ಮಾಡಿದ್ದರು.  ಹೀಗಾಗಿ ಪ್ರಕರಣದಿಂದ ನೋವಾಗಿದೆ. ಇಂತಹ ಘಟನೆ ನಡೆಯಬಾರದಿತ್ತು ಎಂದರು.

ನಾನು ಡಾ. ರಾಜ್ ಕುಮಾರ್ ಯಶ್, ಸುದೀಪ್, ಶಿವಣ್ಣನ ಅಭಿಮಾನಿ. ದರ್ಶನ್  ನಮ್ಮ ಜಿಲ್ಲೆಯವರು ಎಂಬ ಕಾರಣಕ್ಕೆ ವಿಶೇಷ ಅಭಿಮಾನವಿತ್ತು. ನಟ ದರ್ಶನ್ ಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ ಕೊಲೆ ಮಾಡಿರುವುದು ಸತ್ಯವೇ ಆಗಿದ್ದರೇ ತಕ್ಕ ಶಿಕ್ಷೆಯಾಗಲಿ  ಎಂದರು.

Key words: Renukaswamy, murder, case,  Sara Mahesh