Sunday, October 18, 2026

Dasara Wishes

Happy Dasara
Home Front Page ಕುತೂಹಲ ಮೂಡಿಸಿದ  ಡಿ.ಕೆ ಶಿವಕುಮಾರ್ ನಿವಾಸಕ್ಕೆ ಬಿಜೆಪಿ ಮುಖಂಡರ ಭೇಟಿ…

ಕುತೂಹಲ ಮೂಡಿಸಿದ  ಡಿ.ಕೆ ಶಿವಕುಮಾರ್ ನಿವಾಸಕ್ಕೆ ಬಿಜೆಪಿ ಮುಖಂಡರ ಭೇಟಿ…

ಬೆಂಗಳೂರು,ನ,10,2019(www.justkannada.in): ರಾಜ್ಯದಲ್ಲಿ 15 ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಈ ನಡುವೆ  ಬಿಜೆಪಿ ಮುಖಂಡರು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನ ಭೇಟಿಯಾಗಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಕಾಗವಾಡ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ‌ ರಾಜು ಕಾಗೆ ಹಾಗೂ ಗೋಕಾಕ್‌ ಕ್ಷೇತ್ರದ ಮುಖಂಡ ಅಶೋಕ್‌ ಪೂಜಾರಿ, ಡಿ.ಕೆ. ಶಿವಕುಮಾರ್‌ ಅವರ ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ಇಬ್ಬರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿಗಳಾಗಿದ್ದಾರೆ.

ಅನರ್ಹ ಶಾಸಕರಿಗೆ ಟಿಕೆಟ್ ನೀಡಲು ಬಿಜೆಪಿ ಮುಂದಾಗಿದ್ದು ಎನ್ನಲಾಗುತ್ತಿದ್ದು,  ಈ ಹಿನ್ನೆಲೆ ಬಿಜೆಪಿ ಟಿಕೆಟ್ ಸಿಗೋದು ಅನುಮಾನ ಎಂದು ಅರಿತಿರುವ ರಾಜುಕಾಗೆ ಮತ್ತು ಅಶೋಕ್ ಪೂಜಾರಿ ಇಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನ ಭೇಟಿಮಾಡಿ ಮಾತುಕತೆ ನಡೆಸಿದ್ದಾರೆ.

Key words: Two -BJP leaders -meet – DK Sivakumar- residence