Friday, September 11, 2026

BDA Apartments

Home Uncategorized ಭಾರೀ ಮಳೆಯಿಂದಾಗಿ ಗೋಬಲಗುಟ್ಟೆ ಕೆರೆಯ ಕಲ್ಲಿನ ಗೋಡೆ ಬಿರುಕು : ಸ್ಥಳೀಯರಲ್ಲಿ ಹೆಚ್ಚಿದ ಆತಂಕ….

ಭಾರೀ ಮಳೆಯಿಂದಾಗಿ ಗೋಬಲಗುಟ್ಟೆ ಕೆರೆಯ ಕಲ್ಲಿನ ಗೋಡೆ ಬಿರುಕು : ಸ್ಥಳೀಯರಲ್ಲಿ ಹೆಚ್ಚಿದ ಆತಂಕ….

ತುಮಕೂರು,ಅ,24,2019(www.justkannada.in): ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದ ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣಕ್ಕೆ ಹೊಂದಿಕೊಂಡಿರುವ  ಗೋಬಲಗುಟ್ಟೆ ಕೆರೆಯ ಕಲ್ಲಿನ ಗೋಡೆ ಸಂಪೂರ್ಣ ಬಿರುಕು ಬಿಟ್ಟಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ.

ಧಾರಾಕಾರ ಮಳೆಯಿಂದಾಗಿ ಕೋಡಿಯ ನೀರು ಹರಿಯುತ್ತಿರುವ ರಭಸಕ್ಕೆ  ಕಲ್ಲಿನ ಗೋಡೆ ಬಿರುಕು ಬಿಟ್ಟಿದೆ. ಕೊರಟಗೆರೆ ಪಟ್ಟಣಕ್ಕೆ ಹೊಂದಿಕೊಂಡಿರುವ ಗೋಬಲಗುಟ್ಟೆ ಕೆರೆ ಅಪಾಯಕಾರಿ ಸ್ಥಿತಿಯಲ್ಲಿದ್ದು, ಕಲ್ಲಿನ ಗೋಡೆ ಬಿರುಕುನಿಂದ ರೈತರು ಹಾಗೂ ಸುತ್ತಮುತ್ತಲಿನ ಮನೆಗಳ ನಾಗರೀಕರು ಭಯಭೀತರಾಗಿದ್ದಾರೆ.

ಸ್ಥಗಿತಗೊಂಡಿರುವ  ದುರಸ್ತಿ ಕಾಮಗಾರಿ ಮತ್ತೆ ಪ್ರಾರಂಭಿಸುವಂತೆ ತಾಲ್ಲೂಕು ಅಡಳಿತ ಮತ್ತು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಗಮನ ಹರಿಸಿ ತುರ್ತು ದುರಸ್ತಿ ಕಾರ್ಯ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಸ್ಥಳೀಯರು ಅಗ್ರಹಿಸಿದ್ದಾರೆ.

Key words: tumakur-gobalgutte lake-break