Wednesday, August 12, 2026

BDA Apartments

Home Crime ಲಾರಿ ಹರಿದು 13 ವರ್ಷದ ಶಾಲಾ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಲಾರಿ ಹರಿದು 13 ವರ್ಷದ ಶಾಲಾ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ರಾಮನಗರ,ಮಾರ್ಚ್,26,2026 (www.justkannada.in): ಲಾರಿ ಹರಿದು ಶಾಲಾ 13 ವರ್ಷದ ಶಾಲಾ ವಿದ್ಯಾರ್ಥಿ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಬಿಡದಿಯಲ್ಲಿ ನಡೆದಿದೆ.

ವಿಜಯ್ (13) ಮೃತಪಟ್ಟ ಶಾಲಾ ವಿದ್ಯಾರ್ಥಿ.  ಶಾಲೆಗೆ ಹೋಗುತ್ತಿದ್ದಾಗ ಲಾರಿ ಹರಿದು ಈ ದುರ್ಘಟನೆ ಸಂಭವಿಸಿದೆ.

ಬಿಲ್ಲೆಕೆಂಪನಹಳ್ಳಿ ಬಳಿ ಹಾವೇರಿ ಮೂಲದ ಕುಟುಂಬ ವಾಸವಿತ್ತು. ಇಂದು ವಿಜಯ್ ರಸ್ತೆ ಬದಿ ಹೋಗುತ್ತಿದ್ದಾಗ ಲಾರಿ ಹರಿದು ಸ್ಥಳದಲ್ಲೇ ಸಾವನಪ್ಪಿದ್ದಾನೆ.  ಘಟನಾ ಸ್ಥಳಕ್ಕೆ ಪೊಲೀಸರು  ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಾಗಿದೆ. ಚಾಲಕನನ್ನು ಸ್ಥಳೀಯರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Key words: 13-year-old school, student, dies, lorry, Collision