ಗ್ರಾಮೀಣ ಭಾಗದಲ್ಲಿ ಆನ್ ಲೈನ್ ಶಿಕ್ಷಣಕ್ಕೆ ತೊಂದರೆ: ಆರ್ಥಿಕವಾಗಿ ಹಿಂದುಳಿದವರಿಗೂ ಸಹಾಯ ಮಾಡಿ- ಸುಧಾಕರ್ ಎಸ್  ಶೆಟ್ಟಿ ಮನವಿ…

ಮೈಸೂರು,ಆ,22,2020(www.justkannada.in):  ಕೊರೋನಾ ಮಹಾಮಾರಿಯಿಂದಾಗಿ  ಆನ್ ಲೈನ್ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆನ್ ಲೈನ್ ಶಿಕ್ಷಣ ಪಡೆಯಲು ಹಲವು ಸಮಸ್ಯೆಗಳನ್ನ ಎದುರಿಸುತ್ತಿದ್ದು ಈ ಹಿನ್ನೆಲೆ ಆರ್ಥಿಕವಾಗಿ ಹಿಂದುಳಿದವರಿಗು ಸಹಾಯ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮೈಸೂರು ವಲಯದ  ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ,(CISPMAM)ದ ಅಧ್ಯಕ್ಷ ಸುಧಾಕರ್ ಎಸ್  ಶೆಟ್ಟಿ ಮನವಿ ಮಾಡಿದ್ದಾರೆ.jk-logo-justkannada-logo

ಈ ಕುರಿತು ಹೇಳಿಕೆ ನೀಡಿರುವ ಅವರು, ಸ್ವಾತಂತ್ರ ಪೂರ್ವದಲ್ಲಿ 15 ಕೋಟಿಯಿದ್ದ ಜನಸಂಖ್ಯೆ ಈಗ 138 ಕೋಟಿಯತ್ತ ದಾಪುಗಾಲು ಹಾಕುತ್ತಿದೆ. ನಗರಗಳಲ್ಲಿ 48 ಕೋಟಿ ಜನಸಂಖ್ಯೆಯ ವಾಸಿಸುತ್ತಿದ್ದು ಇನ್ನುಳಿದ 90 ಕೋಟಿ ಜನ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.

15-34 ವಯಸ್ಸುಳ್ಳ ವಿದ್ಯಾರ್ಥಿಗಳ ಸಂಖ್ಯೆ 46 ಕೋಟಿಯಿದ್ದು, 15 ಕೋಟಿ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಆನ್ಲೈನ್ ಶಿಕ್ಷಣದ ಕೊರತೆಯಿದೆ , ಈ ಕೊರೋನವೆಂಬ ಮಹಾಮಾರಿಯಿಂದಾಗಿ ಶಿಕ್ಷಣ ಕ್ಷೇತ್ರದ ಕಲಿಕೆಯ ಕ್ರಮದಲ್ಲಿ ಕೆಲವೊಂದು ಬದಲಾವಣೆಗಳಾಗಿದ್ದು , ಶಿಕ್ಷಣವನ್ನು ಅನ್ಲೈನ್ ಮೂಲಕ ನೀಡಬೇಕೆಂದು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅದು ತುಂಬಾ ಕಠಿಣವಾಗಿ ಪರಿಣಮಿಸುತ್ತಿದ್ದು ಕಲಿಕೆಯನ್ನು ಮುಂದುವರಿಸುವಲ್ಲಿ ಪರಿತಪ್ಪಿಸುತ್ತಿದ್ದಾರೆ.

ಗ್ರಾಮೀಣ ಭಾಗದ   ವಿದ್ಯಾರ್ಥಿಗಳ ಬಳಿ ಕಲಿಯಲು ಯಾವುದೇ ರೀತಿಯ ಯಾಂತ್ರಿಕ ಉಪಕರಣಗಳಾದ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ ಹಾಗೂ ಇನ್ನಿತರ ವಸ್ತುಗಳ ಲಭ್ಯತೆಗಳು ಇಲ್ಲದಿರುವುದು ಮತ್ತು ಅದನ್ನು ಕೊಂಡುಕೊಳ್ಳಲು ತಗುಲುವ ವೆಚ್ಚವನ್ನು ಸಹ ಬರಿಸಲು ಸಾಧ್ಯವಾಗದಿರುವುದು ಇದಕ್ಕೆ ಕಾರಣ.Trouble -online education - rural area-Help - economically backward-Sudhakar S Shetty

ಹಾಗಾಗಿ ಈ ವಿಚಾರವನ್ನು ನಾನು ಈ ಸರ್ಕಾರದ  ಗಮನಕ್ಕೆ ತರಲು ಇಚ್ಛಿಸುತ್ತೇನೆ.  ತಾವು ಈ ವಿಚಾರವನ್ನು ಗಣನೆಗೆ ತೆಗೆದುಕೊಂಡು ಆರ್ಥಿಕವಾಗಿ ಹಿಂದುಳಿದವರಿಗೂ ಸಹಾಯ ನೀಡಿದಲ್ಲಿ  ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅದು ಅನೂಕೂಲವಾಗುತ್ತದೆ ಎಂದು ಮೈಸೂರು ವಲಯದ  ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ,(CISPMAM)ದ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಒಕ್ಕೂಟ (FKCCI) ಮಾಜಿ ಅಧ್ಯಕ್ಷರಾದ ಸುಧಾಕರ ಎಸ್  ಶೆಟ್ಟಿ ಮನವಿ ಮಾಡಿದ್ದಾರೆ.

Key words: Trouble -online education – rural area-Help – economically backward-Sudhakar S Shetty