ಸಾರಿಗೆ ನೌಕರರ  ಮುಷ್ಕರ: ನಾಳೆ ಮೊಂಬತ್ತಿ ಬೆಳಗಿಸಿ ವಿಶೇಷ ಸತ್ಯಾಗ್ರಹ….

ಬೆಂಗಳೂರು,ಏಪ್ರಿಲ್,14,2021(www.justkannada.in): 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ ಇಂದು 8ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಸಾರಿಗೆ ನೌಕರರ ಮುಷ್ಕರ ನಾಳೆಯೂ ಮುಂದುವರೆಯಲಿದ್ದು, ಮೊಂಬತ್ತಿ ಬೆಳಗಿಸಿ ವಿಶೇಷ ಸತ್ಯಾಗ್ರಹ ಮಾಡುವುದಾಗಿ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದ್ದಾರೆ.by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappa

ಸಾರಿಗೆ ನೌಕರರ ಮುಷ್ಕರ ಕುರಿತು  ಮಾಧ್ಯಮಗಳ ಜತೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್‌, ‘6ನೇ ಆಯೋಗದ ಜಾರಿಗಾಗಿ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ನಾಳೆಯೂ ಮುಂದುವರೆಯಲಿದೆ. ಆದರೆ, ನಾಳೆ ಮೊಂಬತ್ತಿ ಬೆಳಗಿಸಿ ವಿಶೇಷ ಸತ್ಯಾಗ್ರಹ ಮಾಡಲಿದ್ದೇವೆ. ಸಂಜೆ 6ರಿಂದ 7 ಗಂಟೆಯವರೆಗೆ ಮೊಂಬತ್ತಿ ಬೆಳಗಿಸಿ ವಿಶೇಷ ಚಳುವಳಿ ಮಾಡುತ್ತೇವೆ’ ಎಂದರು.Transport- Employees –Strike-Light - candle – tomorrow-kodihalli Chandra shekar

ಅನಿರ್ಧಿಷ್ಟಾವಧಿವರೆಗೂ ಸಾರಿಗೆ ನೌಕರರ ಮುಷ್ಕರ ಮುಂದುವರೆಯಲಿದೆ.  ಸರ್ಕಾರ 6ನೇ ವೇತನ ಆಯೋಗ ಜಾರಿ ಮಾಡಲೇಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.

Key words: Transport- Employees –Strike-Light – candle – tomorrow-kodihalli Chandra shekar