Thursday, September 24, 2026

BDA Apartments

Home Front Page ವಿದ್ಯುತ್‌ ವಿತರಣೆಗೆ ಟಾಟಾ ಸಂಸ್ಥೆ ಪರವಾನಗಿ ಅರ್ಜಿ: ಸೆಸ್ಕ್‌ ನಿಂದ ಆಕ್ಷೇಪಣೆ ಸಲ್ಲಿಕೆ

ವಿದ್ಯುತ್‌ ವಿತರಣೆಗೆ ಟಾಟಾ ಸಂಸ್ಥೆ ಪರವಾನಗಿ ಅರ್ಜಿ: ಸೆಸ್ಕ್‌ ನಿಂದ ಆಕ್ಷೇಪಣೆ ಸಲ್ಲಿಕೆ

ಮೈಸೂರು, ಜೂನ್. 25, 2026 (www.justkannada.in): ಟಾಟಾ ಪವರ್ ಕಂಪನಿ ಲಿಮಿಟೆಡ್ (ಟಿಪಿಸಿಎಲ್) ಸಲ್ಲಿಸಿರುವ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ಅರ್ಜಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‌ಸಿ) ಎದುರು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಆಕ್ಷೇಪಣೆ ಸಲ್ಲಿಸಿದೆ.

ಪ್ರಸ್ತುತ ಸೆಸ್ಕ್ ವ್ಯಾಪ್ತಿಯಲ್ಲಿರುವ ಮೈಸೂರು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಿಗೆ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ನೀಡುವಂತೆ ಟಾಟಾ ಸಂಸ್ಥೆಯು ಪರವಾನಗಿ ಅರ್ಜಿ ಸಲ್ಲಿಸಿತ್ತು. ಈ ಪ್ರಸ್ತಾವನೆ ಕುರಿತು ಸೆಸ್ಕ್ ಹಲವು ಗಂಭೀರ ಆಕ್ಷೇಪಣೆಗಳನ್ನು ಕೆಇಆರ್‌ಸಿ ಮುಂದೆ ಸಲ್ಲಿಸಿದ್ದು, ವಿದ್ಯುತ್ ಕಾಯ್ದೆ-2003ರಡಿ ಅಗತ್ಯವಿರುವ ಕಾನೂನುಬದ್ಧ ಹಾಗೂ ಸಾರ್ವಜನಿಕ ಹಿತಾಸಕ್ತಿ ಸಂಬಂಧಿತ ಮಾನದಂಡಗಳನ್ನು ಪೂರೈಸುವ ಬಗ್ಗೆ ಟಾಟಾ ಸಂಸ್ಥೆಯು ಅರ್ಜಿಯಲ್ಲಿ ಪ್ರಸ್ತಾಪಿಸಿಲ್ಲ ಎಂದಿದೆ.

 ಸೆಸ್ಕ್ ಸಲ್ಲಿಸಿರುವ ಆಕ್ಷೇಪಣೆಗಳು ಹೀಗಿವೆ…

  1. ಪ್ರಸ್ತಾವಿತ ಪ್ರದೇಶದಲ್ಲಿ ಸ್ವತಂತ್ರ ವಿದ್ಯುತ್ ವಿತರಣಾ ಜಾಲವನ್ನು ನಿರ್ಮಿಸುವ ಕುರಿತು ಟಾಟಾ ಪವರ್ ಸ್ಪಷ್ಟ ಯೋಜನೆ ಸಲ್ಲಿಸಿಲ್ಲ. ಬದಲಾಗಿ, ಸೆಸ್ಕ್‌ ನ ಈಗಿರುವ ಮೂಲಸೌಕರ್ಯವನ್ನು ಅವಲಂಬಿಸಿ ವಿದ್ಯುತ್ ಸರಬರಾಜು ಮಾಡಲು ಉದ್ದೇಶಿಸಿರುವುದಾಗಿ ಹೇಳಿದೆ.
  2. ವಿದ್ಯುತ್ ಖರೀದಿ ಯೋಜನೆಯ ಕುರಿತಾಗಿಯೂ ಸೆಸ್ಕ್ ಆಕ್ಷೇಪ ಸಲ್ಲಿಸಿದ್ದು, ಅಲ್ಪಾವಧಿ ವಿದ್ಯುತ್ ಖರೀದಿ ಹೆಚ್ಚಿನ ಅವಲಂಬನೆಯು ಗ್ರಾಹಕರಿಗೆ ಹೆಚ್ಚುವರಿ ವೆಚ್ಚದ ಭಾರ ಉಂಟುಮಾಡುವ ಸಾಧ್ಯತೆಯಿದೆ.ವಿದ್ಯುತ್‌ ವಿತರಣೆಗೆ ಟಾಟಾ ಸಂಸ್ಥೆ ಪರವಾನಗಿ ಅರ್ಜಿ: ಸೆಸ್ಕ್‌ ನಿಂದ ಆಕ್ಷೇಪ...
  3. ಕೈಗಾರಿಕಾ ಹಾಗೂ ವಾಣಿಜ್ಯ ವಲಯದ ಹೆಚ್ಚಿನ ಆದಾಯ ತರುವ ಗ್ರಾಹಕರನ್ನೇ ಗುರಿಯಾಗಿಸಿಕೊಂಡು ಟಾಟಾ ಸಂಸ್ಥೆ ಸೇವೆ ನೀಡುವ ಸಾಧ್ಯತೆ ಇರುವುದರಿಂದ, ಸಬ್ಸಿಡಿ ಪಡೆಯುವ ಸಾಮನ್ಯ ಗ್ರಾಹಕರಿಗೆ ತೊಂದರೆಯಾಗಬಹುದು. ಅಲ್ಲದೇ ಸೆಸ್ಕ್ ಆರ್ಥಿಕ ಸ್ಥಿರತೆಗೆ ಧಕ್ಕೆ ಉಂಟಾಗಬಹುದು.
  4. ⁠ಗೃಹ, ಕೃಷಿ ಹಾಗೂ ಇತರ ಸಬ್ಸಿಡಿ ಆಧಾರಿತ ಗ್ರಾಹಕರಿಗೆ ನೀಡಲಾಗುತ್ತಿರುವ ಕ್ರಾಸ್ ಸಬ್ಸಿಡಿ ವ್ಯವಸ್ಥೆ ದುರ್ಬಲಗೊಳ್ಳುವ ಅಪಾಯವಿದೆ. ವಿದ್ಯುತ್‌ ವಿತರಣೆಗೆ ಟಾಟಾ ಸಂಸ್ಥೆ ಪರವಾನಗಿ ಅರ್ಜಿ BDA JK_Adv BDA Adv
  5. ಇಂತಹ ವ್ಯವಸ್ಥೆಯಿಂದ ಸೆಸ್ಕ್ ದೀರ್ಘಾವಧಿಯ ವಿದ್ಯುತ್ ಖರೀದಿ ಒಪ್ಪಂದಗಳು, ಸಾರ್ವಜನಿಕ ಸೇವಾ ಬಾಧ್ಯತೆಗಳಿಗೆ ಧಕ್ಕೆ ಉಂಟಾಗುವುದಲ್ಲದೇ, ಗ್ರಾಹಕರಿಗೆ ಹಣಕಾಸಿನ ಹೊರೆ ಹೆಚ್ಚುವ ಸಾಧ್ಯತೆ ಇದೆ.
  6. ಎಲ್ಲಾ ಗ್ರಾಹಕರಿಗೂ ಸಮರ್ಪಕ ಹಾಗೂ ಗುಣಮಟ್ಟದ ವಿದ್ಯುತ್ ಸರಬರಾಜು ಒದಗಿಸುವ ಕಾನೂನುಬದ್ಧ ಹೊಣೆಗಾರಿಕೆ ಸೆಸ್ಕ್ ಮೇಲಿದೆ. ಇದಕ್ಕಾಗಿ ಸೆಸ್ಕ್ 2035ರ ನಂತರವೂ ಮುಂದುವರಿಯುವ ದೀರ್ಘಾವಧಿಯ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಂಡಿದ್ದು, ವಿದ್ಯುತ್ ಬಳಕೆ ಆಗದಿದ್ದರೂ ನಿಗದಿತ ಸ್ಥಿರ ಶುಲ್ಕಗಳನ್ನು ಪಾವತಿಸಬೇಕಾಗಿದೆ. ಟಿಪಿಸಿಎಲ್‌ ಗೆ ಇಂತಹ ಯಾವುದೇ ಹೊಣೆಗಾರಿಕೆಗಳಿಲ್ಲ.
  7. ಟಿಪಿಸಿಎಲ್‌ ನ ವ್ಯವಹಾರ ಮಾದರಿಯು ಹೆಚ್ಚುವರಿ ದರ ಪಾವತಿಸುವ ಗ್ರಾಹಕರನ್ನು ಆಕರ್ಷಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ಇದರಿಂದ ಸೆಸ್ಕ್ ತನ್ನ  80% ಕ್ರಾಸ್ ಸಬ್ಸಿಡಿ ಪಡೆಯುವ ವರ್ಗದ ಗ್ರಾಹಕರಿಗೆ ಸೇವೆ ಒದಗಿಸಲು ಅವಲಂಬಿಸಿರುವ ಆರ್ಥಿಕ ಆಧಾರವೇ ದುರ್ಬಲಗೊಳ್ಳುವ ಸಾಧ್ಯತೆಯಿದೆ.ಸೆಸ್ಕ್‌ ನಿಂದ ಆಕ್ಷೇಪಣೆ ಸಲ್ಲಿಕೆ jk02_new jk02 new

Key words: TPCL, license, power distribution,  CESC objects