‘ತೋತಾಪುರಿ’ ಡಬ್ಬಿಂಗ್’ನಲ್ಲಿ ಜಗ್ಗೇಶ್, ಧನಂಜಯ್ ಬ್ಯುಸಿ !

ಬೆಂಗಳೂರು, ಜುಲೈ 31, 2021 (www.justkannada.in): ‘ನೀರ್ ದೋಸೆ’ ಯಶಸ್ಸಿನ ಬಳಿಕ ಜಗ್ಗೇಶ್ ಹಾಗೂ ವಿಜಯ ಪ್ರಸಾದ್ ಮತ್ತೆ ಒಗ್ಗೂಡಿ ಮಾಡುತ್ತಿರುವ ‘ತೋತಾಪುರಿ’ ಬಿಡುಗಡೆಗೆ ಸಿದ್ಧವಾಗಿದೆ.

ಈ ಚಿತ್ರದ ಡಬ್ಬಿಂಗ್ ಕಾರ್ಯವೂ ಮುಕ್ತಾಯಗೊಂಡಿದೆ. ಕೆಲ ದಿನಗಳ ಹಿಂದೆ ಜಗ್ಗೇಶ್ ಹಾಗೂ ಧನಂಜಯ್ ಡಬ್ ಮಾಡಿದ್ದಾರೆ.

ಅಂದಹಾಗೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಬಹುತೇಕ ಮುಗಿಸಿರುವ ಚಿತ್ರತಂಡ, ಸಿನಿಮಾವನ್ನು ಸದ್ಯದಲ್ಲೇ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.

ದತ್ತಣ್ಣ, ಸುಮನ್ ರಂಗನಾಥ್, ಅದಿತಿ ಪ್ರಭುದೇವ, ವೀಣಾ ಸುಂದರ್, ಹೇಮಾದತ್ ಸೇರಿದಂತೆ ಸುಮಾರು 80ಕ್ಕೂ ಅಧಿಕ ಕಲಾವಿದರು ನಟಿಸಿರುವ ಈ ಚಿತ್ರಕ್ಕೆ ಬೆಂಗಳೂರು, ಮೈಸೂರು, ಕೂರ್ಗ್, ಕೇರಳ ಮೊದಲಾದ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕೆ.ಎ.ಸುರೇಶ್ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.