ಟೋಕಿಯೊ ಒಲಿಂಪಿಕ್ಸ್: ಕೋಟ್ಯಂತರ ಭಾರತೀಯರ ಕಣ್ಣು ಮತ್ತೆ ಸಿಂಧುನತ್ತ…

ಬೆಂಗಳೂರು, ಜುಲೈ 31, 2021 (www.justkannada.in): ಕೋಟ್ಯಂತರ ಭಾರತೀಯ ಅಭಿಮಾನಿಗಳ ಕಣ್ಣು ಈ ಬಾರಿ ಮತ್ತೆ ಸಿಂಧುವಿನ ಮೇಲೆ ನೆಟ್ಟಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಬರ್ದಸ್ತ್ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದಿದ್ದಾರೆ ಸಿಂಧು. 2-20 ಅಂತರದಲ್ಲಿ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಗೆಲುವು ಸಾಧಿಸಿ ಒಲಿಂಪಿಕ್ಸ್ ನಲ್ಲಿ ಅದ್ಭುತ ಪ್ರಯಾಣವನ್ನು ಮುಂದುವರೆಸಿದ್ದಾರೆ.

ರಿಯೊ ಒಲಿಂಪಿಕ್ಸ್‌ನಲ್ಲಿ ಸಿಂಧು ಬೆಳ್ಳಿ ಪದಕ ಗೆದ್ದಿದ್ದರು, ಆದರೆ ಅವರು ಚಿನ್ನ ಪಡೆಯುವುದರಿಂದ ಕೇವಲ ಒಂದು ಹೆಜ್ಜೆ ದೂರದಲ್ಲಿದ್ದರು.

ಇದಕ್ಕೂ ಮೊದಲು ಸಿಂಧು ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್ ನ ಮಿಯಾ ಬ್ಲಿಚ್ಫೆಲ್ಟ್ ಅವರನ್ನು 21-15 ಹಾಗೂ 21-13 ನೇರ ಸೆಟ್ ಗಳಲ್ಲಿ ಮಣಿಸಿ ಕ್ವಾರ್ಟರ್ ಫೈನಲ್ ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು.