ನಟಿ ಶಿಲ್ಪಾಶೆಟ್ಟಿಗೆ ಶಾಕ್ ನೀಡಿದ ಬಾಂಬೆ ಹೈಕೋರ್ಟ್

ಬೆಂಗಳೂರು, ಜುಲೈ 31, 2021 (www.justkannada.in): ನಟಿ ಶಿಲ್ಪಾಶೆಟ್ಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದಿದ್ದು, ವರದಿಗಾರಿಕೆಯ ಮೇಲೆ ತಡೆ ವಿಧಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.

ವರದಿಗಾರಿಕೆಯ ಮೇಲೆ ತಡೆ ವಿಧಿಸಿದರೆ ಮಾಧ್ಯಮಗಳ ಸ್ವಾತಂತ್ರ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಆದರೆ, ಕೆಲ ಖಾಸಗಿ ವ್ಯಕ್ತಿಗಳ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿರುವ 3 ವಿಡಿಯೋಗಳನ್ನು ತೆಗೆದುಹಾಕಬೇಕು ಎಂದು ಜಸ್ಟಿಸ್ ಗೌತಮ್ ಪಟೇಲ್ ನಿರ್ದೇಶಿಸಿದ್ದಾರೆ.

ನಟಿಯ ನೈತಿಕತೆಯ ಕುರಿತು ಎಲ್ಲಾ ಮೂರು ವೀಡಿಯೊಗಳಲ್ಲಿ ಕಾಮೆಂಟ್ ಮಾಡಲಾಗಿದೆ ಮತ್ತು ಪೋಷಕರಾಗಿ ಆಕೆಯಪಾತ್ರವನ್ನು ಪ್ರಶ್ನಿಸಲಾಗಿದೆ.

ಜುಲೈ 19 ರಂದು ಕುಂದ್ರಾ ಬಂಧನದ ನಂತರ ನಟಿ ಶಿಲ್ಪಾ ಮತ್ತು ಆಕೆಯ ಕುಟುಂಬದ ವಿರುದ್ಧ ಅವಹೇಳನಕಾರಿ ವರದಿಗಳನ್ನು ಪ್ರಕಟಿಸಿದ್ದಕ್ಕಾಗಿ ನಟಿ ಸಲ್ಲಿಸಿದ ಪ್ರಕರಣವನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.