ಸಾವಿನ ಸುದ್ದಿ ಸುಳ್ಳು: ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ಬಳಿಕ ಸ್ಪಷ್ಟನೆ ನೀಡಿದ ಶಕೀಲಾ

ಬೆಂಗಳೂರು, ಜುಲೈ 31, 2021 (www.justkannada.in): ಇತ್ತೀಚಿಗೆ ನಟ, ನಟಿಯರ ಸಾವಿನ ಸುಳ್ಳು ಸುದ್ದಿಗಳು ಹೆಚ್ಚು ಹರಿದಾಡುತ್ತಿವೆ. ಆ ಸಾಲಿಗೆ ಹೊಸ ಸೇರ್ಪಡೆಯಾಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ಅನೇಕರು ಶಕೀಲಾಗೆ ಸಂತಾಪ ಸೂಚಿಸಿದ್ದರು. ಇದು ಸುಳ್ಳು ಎಂದು ಶಕೀಲಾ ಸ್ಪಷ್ಟನೆ ನೀಡಿದ್ದಾರೆ. ಶಕೀಲಾ ಮೃತಪಟ್ಟಿದ್ದಾರೆ ಎಂದು ಕೆಲವು ಮಾಧ್ಯಮಗಳು ಹಾಗೂ ಸೋಶಿಯಲ್​ ಮೀಡಿಯಾಗಳು ವರದಿ ಬಿತ್ತರ ಮಾಡಿದ್ದವು.

ಸಾಕಷ್ಟು ಜನರು ಈ ಬಗ್ಗೆ ಕಾಳಜಿ ತೋರಿದ್ದಾರೆ. ನನಗೆ ಈ ಬಗ್ಗೆ ಸಾಕಷ್ಟು ಕರೆಗಳು ಹಾಗೂ ಮೆಸೇಜ್​ಗಳು ಬಂದಿವೆ. ನಿಮ್ಮ ಪ್ರೀತಿಗೆ ನಾನು ಆಭಾರಿ’ ಎಂದು ಶಕೀಲಾ ಹೇಳಿದ್ದಾರೆ.

ಇತ್ತೀಚೆಗೆ ಶಕೀಲಾ ಅವರು ‘ಅಟ್ಟರ್​ ಫ್ಲಾಪ್’​ ಮತ್ತು ‘ರೊಮ್ಯಾಂಟಿಕ್​’ ಸಿನಿಮಾಗಳ ಪೋಸ್ಟರ್​ಗಳನ್ನು ಬಿಡುಗಡೆ ಮಾಡಿದ್ದರು. ಈ ಎರಡೂ ಸಿನಿಮಾಗಳಲ್ಲಿ ಅವರ ಸಾಕು ಮಗಳು ಮಿಲಾ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ.