2020ಕ್ಕೆ ಮೈಸೂರು ವಿವಿ ಶತಮಾನೋತ್ಸವ ಘಟಿಕೋತ್ಸವ : ಪ್ರಧಾನಿ ಮೋದಿ ಆಹ್ವಾನಿಸಿದ ಕುಲಪತಿ ಪ್ರೊ.ಜೆ.ಹೇಮಂತ್ ಕುಮಾರ್.

 

ಮೈಸೂರು, ಜು.16, 2019 : (www.justkannada.in news) ಮೈಸೂರು ವಿಶ್ವವಿದ್ಯಾನಿಲಯ 2020ರಲ್ಲಿ ವಿವಿಯ ಶತಮಾನೋತ್ಸವ ಘಟಿಕೋತ್ಸವವನ್ನು ಆಚರಿಸಲಿದೆ. ಈ ಸಮಾರಂಭದಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಯಿತು.

ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಅವರು ಸೋಮವಾರ ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಈ ಸಂಬಂಧ ಅಧಿಕೃತವಾಗಿ ಆಹ್ವಾನಿಸಿದರು. ಶತಮಾನೋತ್ಸವ ಸಂಭ್ರಮದಲ್ಲಿರುವ ಮೈಸೂರು ವಿವಿ 2020ಕ್ಕೆ ಶತಮಾನೋತ್ಸವ ಘಟಿಕೋತ್ಸವಕ್ಕೆ ಸಾಕ್ಷಿಯಾಗಲಿದೆ. ಆದ್ದರಿಂದ ಈ ಐತಿಹಾಸಿಕ ಸಮಾರಂಭದಲ್ಲಿ ಉಪಸ್ಥಿತರಿರುವಂತೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲಾಯಿತು. ಈ ಆಹ್ವಾನವನ್ನು ಸಂತಸದಿಂದಲೇ ಸ್ವೀಕರಿಸಿದ ಪ್ರಧಾನಿ ಮೋದಿ, ಕಾರ್ಯದೊತ್ತಡ ಪರಿಶೀಲಿಸಿ ಆಗಮಿಸುವ ಸಾಧ್ಯಸಾಧ್ಯತೆ ಬಗ್ಗೆ ಸದ್ಯದಲ್ಲೇ ಸ್ಪಷ್ಟಪಡಿಸುವ ಆಶ್ವಾಸನೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ನಡೆದು ಬಂದ ದಾರಿ, ಅಭಿವೃದ್ಧಿ ಹಾಗೂ ಕಾರ್ಯ ಚಟುವಟಿಕೆಗಳ ಬಗೆಗಿನ ಮಾಹಿತಿಯನ್ನು ಕುಲಪತಿ ಪ್ರೊ.ಜೆ.ಹೇಮಂತ್ ಕುಮಾರ್ ನೀಡಿದರು. ಈ ವೇಳೆಯಲ್ಲೇ ವಿಶ್ವವಿದ್ಯಾನಿಲಯವು ಶತಮಾನೋತ್ಸವವನ್ನು ಆಚರಿಸಿಕೊಂಡಿದ್ದರ ಬಗ್ಗೆಯೂ ಚರ್ಚಿಸಿದ ಪ್ರಧಾನಿ ಮೋದಿ, ಮುಕ್ತವಾಗಿ ಶ್ಲಾಘಿಸಿದರು.

‘ ಇನ್ಸಿಟಿಟ್ಯೂಟ್ ಆಫ್ ಎಮಿನೆನ್ಸ್ ಪ್ರಾಜೆಕ್ಟ್ ‘ ಗೆ ಸಂಬಂಧಿಸಿದಂತೆ ದೇಶದ ಕೆಲ ವಿಶ್ವವಿದ್ಯಾನಿಲಯಗಳಿಗೆ ಈಗಾಗಲೇ ಕೇಂದ್ರ ಸರಕಾರ ಅನುದಾನದ ನೆರವು ನೀಡಿದೆ. ಈ ಸಂಬಂಧ ಮೈಸೂರು ವಿವಿಯೂ ಸಹ ಸಾವಿರ ಕೋಟಿ ರೂ.ಗಳಿಗೆ ಈ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿದ್ದು, ಈ ಪ್ರಸ್ತಾವನೆಯನ್ನು ಮತ್ತೆ ಮರು ಪರಿಶೀಲಿಸುವಂತೆ ಕುಲಪತಿ ಪ್ರೊ.ಹೇಮಂತ್ ಕುಮಾರ್ ಅವರು ಪ್ರಧಾನಿಯನ್ನು ಕೋರಿಕೊಂಡರು.
ಇದೇ ಸಂದರ್ಭದಲ್ಲಿ ಕುಲಪತಿಗಳು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಕಾಫಿ ಟೇಬಲ್ ಬುಕ್ ಅನ್ನು ಪ್ರಧಾನ ಮಂತ್ರಿಗಳಿಗೆ ನೀಡಿದರು.

ಈ ವೇಳೆ ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಹಾಜರಿದ್ದರು.

KEY WORDS : University of Mysore Vice Chancellor Prof. G. Hemantha Kumar met Prime Minister Narendra Modi

————————-
ENGISH SUMMARY :

University of Mysore Vice Chancellor Prof. G. Hemantha Kumar met Prime Minister Narendra Modi

Prof. G. Hemantha Kumar, Vice Chancellor, University of Mysore met Hon’ble Prime Minister ShriNarendraModijialong with Mysore-KodaguParliament Member of Sri Prathap Simha and Bengaluru South Parliament Member Sri Tejaswi Surya on 15.7.2019

Hon’ble Prime Minister ShriNarendraModiji lauded the achievements of the University of Mysore during its 100 years journey and the celebration of its centenary. During this occasion Prof. G. Hemanta Kumar discussed with Hon’ble Prime Minister regarding Centenary Convocation which will be held on during the year 2020 and also requested Hon’ble Prime Minister to reconsider the proposal of Institution of Eminence for University of Mysore, Mysuru.
In this occasions Vice Chancellor presented the Coffee Table Book of University of Mysore to Hon’ble Prime Minister Narendra Modi Ji.