Sunday, August 16, 2026

BDA Apartments

Home Front Page ಮೊದಲು ಹೆಚ್ ಡಿಕೆ ಅವರ ವೈಪಲ್ಯ ನೋಡಿಕೊಳ್ಳಲಿ- ಡಿಸಿಎಂ ಡಿಕೆ ಶಿವಕುಮಾರ್ ಕಿಡಿ

ಮೊದಲು ಹೆಚ್ ಡಿಕೆ ಅವರ ವೈಪಲ್ಯ ನೋಡಿಕೊಳ್ಳಲಿ- ಡಿಸಿಎಂ ಡಿಕೆ ಶಿವಕುಮಾರ್ ಕಿಡಿ

ಬೆಂಗಳೂರು,ಅಕ್ಟೋಬರ್,31,2024 (www.justkannada.in): ಸರ್ಕಾರ ಪತನ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಹೆಚ್ ಡಿ ಕುಮಾರಸ್ವಾಮಿಗೆ ಸಿಎಂ ಸಿದ್ದರಾಮಯ್ಯನವರ ಆಡಳಿತ ಸಹಿಸಲು ಆಗುತ್ತಿಲ್ಲ. ಯಾರು ಕುಮಾರಸ್ವಾಮಿ, ಏನು ಗೊತ್ತಿದೆ ಅವರಿಗೆ.  ಹೆಚ್ ಡಿಕೆಗೆ  ಅವರ ಸ್ಥಾನವನ್ನೇ ಉಳಿಸಿಕೊಳ್ಳಲು ಆಗುತ್ತಿಲ್ಲ ಎಂದು ಲೇವಡಿ ಮಾಡಿದರು.

ಹೆಚ್ ಡಿ ಕುಮಾರಸ್ವಾಮಿಗೆ ಯಾವ ಉತ್ತರವನ್ನೂ ಕೊಡಲ್ಲ.  ಮೊದಲು ಹೆಚ್ ಡಿ ಕುಮಾರಸ್ವಾಮಿ ಅವರ ವೈಪಲ್ಯ ನೋಡಿಕೊಳ್ಳಲಿ ನಾನು ಜೆಡಿಎಸ್ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

Key words: Central Minister, HDK, failure, care, first – DCM, DK Shivakumar