ಬೆಂಗಳೂರು, ಸೆಪ್ಟೆಂಬರ್ 26, 2019 (www.justkannada.in): ನಟಿ ತ್ರಿಷಾ ಕೃಷ್ಣನ್ ನಟಿಸಿರುವ ಥ್ರಿಲ್ಲರ್ ಚಿತ್ರ ‘ಪರಮಪದಂ’ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ‘ಯು’ ಪ್ರಮಾಣಪತ್ರ ನೀಡಲು ನಿರಾಕರಿಸಿದೆ.
ಈ ಚಿತ್ರವನ್ನು ಕೆ. ತಿರುಗುಣಮ್ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಈ ಚಿತ್ರವನ್ನು ಪ್ರಮಾಣಪತ್ರಕ್ಕಾಗಿ ಮಂಡಳಿಗೆ ಕಳುಹಿಸಿಕೊಡಲಾಗಿತ್ತು. ಆದರೆ ಕೆಲವು ವಿವಾದಾತ್ಮಕ ದೃಶ್ಯಗಳಿಂದಾಗಿ ಚಿತ್ರಕ್ಕೆ ಯು ಪ್ರಮಾಣಪತ್ರ ನೀಡಲು ಮಂಡಳಿ ನಿರಾಕರಿಸಿದೆ.
ಮರುಮೌಲ್ಯಮಾಪನಕ್ಕೆ ಸಿನಿಮಾವನ್ನು ಚಿತ್ರತಂಡ ಕಳುಹಿಸುತ್ತಿಲ್ಲ. ಅಕ್ಟೋಬರ್ ತಿಂಗಳಲ್ಲಿ ಈ ಸಿನಿಮಾವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.