ಬೆಂಗಳೂರು,ಜೂ,18,2019(www.justkannada.in): ಸಮ್ಮಿಶ್ರ ಸರ್ಕಾರದ ನೂತನ ಸಚಿವರಾಗಿ ಇಬ್ಬರು ಪಕ್ಷೇತರ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರೂ ಇನ್ನು ಖಾತೆ ಹಂಚಿಕೆ ಮಾಡದಿರುವುದಕ್ಕೆ ಸಮ್ಮಿಶ್ರ ಸರ್ಕಾರದ ವಿರುದ್ದ ಜೆಡಿಎಸ್ ಶಾಸಕ ಹೆಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಹೆಚ್.ವಿಶ್ವನಾಥ್, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಎಷ್ಟು ದಿನ ಆಯಿತು. ನೂತನ ಸಚಿವರಿಗೆ ಇನ್ನು ಏಕೆ ಖಾತೆ ಹಂಚಿಕೆ ಮಾಡಿಲ್ಲ. ದಲಿತರು , ಹಿಂದುಳಿದ ವರ್ಗದವರಿಗೆ ಅಪಮಾನ ಮಾಡಬೇಡಿ. ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಎಂದು ಹೇಳಿದ್ದಾರೆ.
ಮಹೇಶ್ ರಾಜೀನಾಮೆ ನಂತರ ಶಿಕ್ಷಣ ಇಲಾಖೆಗೆ ಮುಖ್ಯಸ್ಥರೇ ಇಲ್ಲದಂತಾಗಿದೆ. ಪಠ್ಯಪುಸ್ತಕ ಸೇರಿ ಶಿಕ್ಷಣ ಇಲಾಖೆಯಲ್ಲಿ ಹಲವು ಸಮಸ್ಯೆಗಳಿವೆ. ಶಿಕ್ಷಣ ಇಲಾಖೆಗೆ ತುರ್ತಾಗಿ ಸಚಿವರು ಬೇಕಾಗಿದೆ. ಸಿಎಂ ಬಳಿ ಅಬಕಾರಿ ಖಾತೆ ಸೇರಿ ಹಲವು ಖಾತೆಗಳಿವೆ. ಅವುಗಳನ್ನ ಬೇರೆಯವರಿಗೆ ಹಂಚಿ ಎಂದು ಹೆಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ.
ಹಾಗಯೇ ಬಿಎಂ ಫಾರೂಕ್ ಗೆ ಸಚಿವ ಸ್ಥಾನ ನೀಡದಕ್ಕೆ ಬೇಸರ ವ್ಯಕ್ತಪಡಿಸಿರುವ ಹೆಚ್.ವಿಶ್ವನಾಥ್, ಬಿ.ಎಂ ಫಾರೂಕ್ ಗೆ ಸಚಿವ ಸ್ಥಾನ ನೀಡಬೇಕಿತ್ತು. ಇದರಿಂದ ಜೆಡಿಎಸ್ ನಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡಿದಂತಾಗುತ್ತಿತ್ತು ಎಂದು ಹೇಳಿದರು.
ಪಕ್ಷೇತರ ಶಾಸಕರಾದ ನಾಗೇಶ್ ಮತ್ತು ಆರ್. ಶಂಕರ್ ನೂತನ ಸಚಿವರಾಗಿ ಪ್ರಮಾಣ ವಚನಸ್ವೀಕರಿಸಿ ನಾಲ್ಕು ದಿನಗಳು ಕಳೆದಿದ್ದು ಇನ್ನು ಖಾತೆ ಹಂಚಿಕೆಯಾಗಿಲ್ಲ.
Key words: new Minister- coalition government- H.Vishwanath -resents