ಕಾಂಗ್ರೆಸ್ ನಿಂದ‌ ಟೂಲ್ ಕಿಟ್ ರಾಜಕಾರಣ, ಒಡೆದು ಆಳುವ ನೀತಿ: ಮಾಜಿ ಸಚಿವ ಸಿ.ಟಿ ರವಿ ವಾಗ್ದಾಳಿ.

ಮೈಸೂರು,ಮಾರ್ಚ್,1,2024(www.justkannada.in):  ಕಾಂತರಾಜ ಸಮಿತಿ ತಯಾರಿಸಿದ ಜಾತಿ ಗಣತಿ ವರದಿಯನ್ನ ಸಿಎಂ ಸಿದ್ದರಾಮಯ್ಯ ಸ್ವೀಕಾರ ಮಾಡಿದ್ದಾರೆ. ಇದು ಜಾತಿ ಜಾತಿಗಳ ಮೇಲೆ ಎತ್ತಿ ಕಟ್ಟಿ ಒಡೆದು ಆಳುವ ನೀತಿಯಾಗಿದೆ ಎಂದು ಮಾಜಿ ಸಚಿವ ಸಿ.ಟಿ ರವಿ ವಾಗ್ದಾಳಿ ನಡೆಸಿದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾರ್ಯಕರ್ತರೊಂದಿಗೆ ಸಮಾಲೋಚನೆ ಸಭೆ ಬಳಿಕ ಸುದ್ದಿ ಗೋಷ್ಠಿ ನಡೆಸಿ ಸಿ.ಟಿ ರವಿ ಮಾತನಾಡಿದರು.

ಜಾತಿ ಗಣತಿ ವರದಿ ಸ್ವೀಕಾರ ಇದು ಕಾಂಗ್ರೆಸ್ ನ ಸಂಚಾಗಿದ್ದು, ಅವರಲ್ಲೇ ಉಪ ಮುಖ್ಯಮಂತ್ರಿಗಳು ವಿರೋಧ ಮಾಡಿದ್ದಾರೆ. ಇನ್ನೊಬ್ಬ ಸಚಿವರು ಸಾಕಷ್ಟು ವಿರೋಧ ಮಾಡಿದ್ದಾರೆ. ಇದು ಕಾಂಗ್ರೆಸ್ ನ‌ ಟೂಲ್ ಕಿಟ್ ರಾಜಕಾರಣ ಮಾಡುತ್ತಿದ್ದಾರೆ. ಇದರಲ್ಲಿ ರಾಜಕೀಯ ಸಂಚು ಎದ್ದು ಕಾಣುತ್ತಿದೆ ಎಂದು ಹೇಳಿದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾರ್ಯಕರ್ತರೊಂದಿಗೆ ಈಗಾಗಲೇ ಸಭೆ ಮಾಡಿ ಬಂದಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಮೈಸೂರು, ಚಾಮರಾಜನಗರ ಎರಡರಲ್ಲೂ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ಎಂಬ ನಿಲುವನ್ನು ಕಾರ್ಯಕರ್ತರ ಅಭಿಪ್ರಾಯವಾಗಿದೆ. ದೇಶದಲ್ಲಿ ಮೋದಿ ಅಲೆ ಇನ್ನಷ್ಟು ಹೆಚ್ಚಾಗಿದೆ.  ಸದ್ಯಕ್ಕೆ ರಾಜ್ಯದಲ್ಲಿ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಿದ್ದಿರುವ ಶೇ 35 ರಿಂದ 40 ರಷ್ಟು ಮತಗಳು  ಬಿಜೆಪಿಗೆ ಬರುವ ಸಾಧ್ಯತೆ ಇದೆ.  ಈಗಿನ ಸರ್ಕಾರ ಕುಣಿಯಲಾರದವಳು ನೆಲಡೊಂಡು ಅನ್ನುವ ಹಾಗೆ ಸರಿಯಾಗಿ ಆಡಳಿತ ಮಾಡದೇ ಕೇಂದ್ರದ ಮೇಲೆ ಬೊಟ್ಟು ಮಾಡುತ್ತಿದೆ.  ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಕುಡಿಯುವ ನೀರಿಗೂ ಹಾಹಾಕಾರವಾಗುತ್ತಿದೆ. ರಾಜ್ಯ ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲವಾಗಿದೆ. ಎಸ್ ಇಪಿ ಟಿಎಸ್ಪಿ ಹಣವನ್ನ‌ ಗ್ಯಾರಂಟಿ ಯೋಜನೆಗಳಿಗಾಗಿ ದುರುಪಯೋಗ ಮಾಡಿಕೊಂಡಿದೆ.  ಅಂಬೇಡ್ಕರ್ ಬದುಕಿದ್ದಾಗ ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಅವರ ಭಾವ ಚಿತ್ರ ಬಳಸಲು ಕಾಂಗ್ರೆಸ್ ಗೆ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

ಪಾಕಿಸ್ತಾನ್ ಜಿಂದಾಬದ್ ಘೋಷಣೆ ಇದೇನು ಹೊಸದೇನಲ್ಲ. ಕಾಶ್ಮೀರದಲ್ಲಿ, ಬೇರೆ ಬೇರೆ ಕಡೆ ಕೇಳಿದ್ದವು. ಈಗ ವಿಧಾನಸೌಧದ ವರೆಗೂ ಬಂದಿದೆ. ಎಫ್ ಎಸ್ ಎಲ್ ತನಿಖೆ ಒಳಪಡಿಸಿದ್ದೇವೆ ಎನ್ನುತ್ತಾರೆ. ಆದರೆ ಮರಿ ಖರ್ಗೆ ಅವರು ತನಿಖಾಧಿಕಾರಿ ತರಾನೇ ಇಲ್ಲಿ ಘೋಷಣೆ ಕೂಗಿಲ್ಲ ಎಂದು ಹೇಳುತ್ತಾರೆ. ಈ‌ ಪ್ರಕರಣ ಮುಚ್ಚಿ ಹಾಕುವ ಸಂಶಯ ನನಗಿದೆ. ಈ ಕೂಡಲೇ ಈ ಕುರಿತು ತನಿಖೆ ಆಗಬೇಕು. ನಾಲ್ಕು ಜನರನ್ನ ವಶಕ್ಕೆ ಪಡೆದಿದ್ದಾರೆ ಈಗ ಪ್ರಿಯಾಂಕ್ ಖರ್ಗೆ ಅವರೇ ನೀವು ಏನು ಹೇಳ್ತೀರಿ..? ಎಂದು ಸಿಟಿ ರವಿ ಪ್ರಶ್ನಿಸಿದರು.

ಎಲ್ಲಾ ಕಾಂಗ್ರೆಸ್ ಮುಖಂಡರಿಗೆ ಕಲೆಕ್ಷನ್ ಟಾಸ್ಕ್

ಮೊದಲೆಲ್ಲ ಬಿಜೆಪಿ ಅವರನ್ನು 40% ಸರ್ಕಾರ ಅಂತ ಆರೋಪ ಮಾಡಿದರು. ಈಗ 40% ಮೀರಿ ಸಬ್ ಜಾರ್ಜ್ ಕೂಡ ಹಾಕ್ತಾ ಇದ್ದಾರೆ.ಕನಕಪುರ ಜಾರ್ಜ್ ಕೊಡದೇ ಯಾವ ಬಿಲ್ಲೂ ಪಾಸಾಗಲ್ಲ. ಈ ರೀತಿ ಜಿಲ್ಲೆಗಳಿಗೆ ಜಾಗೀರ್ ಕೊಟ್ಟಿದ್ದಾರೆ. ಎಲ್ಲಾ ಕಾಂಗ್ರೆಸ್ ಮುಖಂಡರಿಗೆ ಕಲೆಕ್ಷನ್ ಟಾಸ್ಕ್ ಕೊಟ್ಟಿದ್ದಾರೆ. ನಮಗೆ ನಮ್ಮ ಅಭಿವೃದ್ಧಿ ವಿಚಾರವನ್ನೇ ಮುಂದಿಟ್ಟು ಚುನಾವಣೆಯನ್ನು ಎದುರಿಸುತ್ತೇವೆ. ಸಬ್ ಕಾ ಸಾಥ್ ಸಬ್ ಕಾ ವಿಕಾಶ್ ನೀತಿಯೊಂದಿಗೆ 10 ವರ್ಷ ಮೋದಿ ಅಧಿಕಾರ ಕೊಟ್ಟಿದ್ದಾರೆ ಎಂದರು.

ಬೇಕಿದ್ರೆ ಬಹಿರಂಗ ಚರ್ಚೆಗೆ ಬರಲಿ ಪ್ರಮಾಣ ಮಾಡಲಿ. 1 ಕೆ ಜಿ ಅಕ್ಕಿಯನ್ನು ಕೊಟ್ಟಿಲ್ಲ.

ಸಿದ್ದರಾಮಯ್ಯ ಟೋಪಿ ಹಾಕೋದ್ರಲ್ಲಿ‌ ತೋರಿಸುವ ಆಸಕ್ತಿ ಕುಂಕುಮ ಹಾಕೋಕೆ ತೋರಿಸಲ್ಲ. ಅನ್ನಭಾಗ್ಯ ಯೋಜನೆಯಲ್ಲಿ 1 ಕೆ ಜಿ ಅಕ್ಕಿಯನ್ನು ಕೊಟ್ಟಿಲ್ಲ. ಬೇಕಿದ್ರೆ ಬಹಿರಂಗ ಚರ್ಚೆಗೆ ಬರಲಿ ಪ್ರಮಾಣ ಮಾಡಲಿ ಎಂದು ಸಿಎಂ ಸಿದ್ದರಾಮಯ್ಯಗೆ ಸಿ.ಟಿ ರವಿ ಬಹಿರಂಗ ಸವಾಲ್ ಹಾಕಿದರು.

ಪಾಕ್ ಪರ ಘೋಷಣೆ ಪ್ರಕರಣ ವಿಚಾರ. ಎಫ್ ಎಸ್ಎಲ್ ವರದಿ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸಿ.ಟಿ ರವಿ, ಪ್ರಕರಣವನ್ನು ಮುಚ್ಚಿ ಹಾಕುವ ಸಂಚನ್ನ ಮಾಡುತ್ತಿದ್ದಾರೆ. ಬಂಧಿಸಿದವರನ್ನ ತನಿಖೆ ಮಾಡುತ್ತಿದ್ದಾರೋ ಅಥವಾ ಕೂರಿಸಿಕೊಂಡು ಬಿರಿಯಾನಿ ತಿನ್ನಿಸುತ್ತಿದ್ದಾರೋ ಗೊತ್ತಿಲ್ಲ. ಜಾತಿ ಗಣತಿಯಲ್ಲಿ ಎಸ್ಸಿ, ಎಸ್ಟಿ ಹೊರತು ಪಡಿಸಿ ಮುಸಲ್ಮಾನರು  ಎರಡನೇ ಸ್ಥಾನದಲ್ಲಿದ್ದಾರೆ ಎನ್ನುವುದಾದರೆ ಅವರನ್ನೇಕೆ ನಾವು ಅಲ್ಪ ಸಂಖ್ಯಾತರು ಅಂತ ಅಲ್ಪ ಸಂಖ್ಯಾತ ಸೌಲಭ್ಯಗಳನ್ನು ಕೊಡಬೇಕು.? ಇದೆಲ್ಲ ಕಾಂಗ್ರೆಸ್ ನವರು ಮಗುವನ್ನು ಚಿವುಟಿ ತೊಟ್ಟಿಲನ್ನು ತೂಗುವ ಕೆಲಸವನ್ನು ಮಾಡುತ್ತಿರುವ ಕೆಲಸವನ್ನು ಮಾಡುತ್ತಿದೆ ಎಂದು ಕಿಡಿಕಾರಿದರು.

ಪಾಕಿಸ್ತಾನ್ ಜಿಂದಾಬಾದ್ ಪ್ರಕರಣ. ನಾಲ್ವರನ್ನು ಪೊಲೀಸರು ವಿಚಾರಣೆ ಮಾಡ್ತಿದ್ದಾರೋ ಅಥವಾ ಬಿರಿಯಾನಿ ತಿನ್ನಿಸುತ್ತಿದ್ದಾರೋ? ಮುಸ್ಲಿಂರನ್ನು ಬ್ರದರ್ಸ್ ಅಂತಾ ಡಿಕೆಶಿಯೆ ಹೇಳಿದ್ದಾರೆ.  ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೆ ಬಿರಿಯಾನಿ ಕೊಟ್ಟಿದ್ದರು ಅಚ್ಚರಿ ಬೇಡ ಎಂದು ಲೇವಡಿ ಮಾಡಿದರು.

ಜಾತಿ ಗಣತಿ ವಿಚಾರ ಕುರಿತು ಮಾತನಾಡಿದ ಸಿಟಿ ರವಿ, ಕಾಂಗ್ರೆಸ್ ಮಗುವನ್ನು ತೂಗೋ ಕೆಲಸ ಮತ್ತು ಚಿವುಟೋ ಕೆಲಸ ಎರಡು ಮಾಡ್ತಿದೆ. ವರದಿ ವಿಚಾರದಲ್ಲಿ ಕಾಂಗ್ರೆಸ್ ನಲ್ಲಿ ಒಬ್ಬೊಬ್ಬರದು ಒಂದೊಂದು ನಿಲುವು. ವರದಿ ವಿಚಾರದಲ್ಲಿ ಸಿಎಂ ನಡೆ ಒಪ್ಪದವರು ರಾಜೀನಾಮೆ ಕೊಟ್ಟು ಬರಲಿ.  ಅದನ್ನು ಬಿಟ್ಟು ನಾಟಕ ಆಡಬೇಡಿ. ವರದಿ ವಿಚಾರದಲ್ಲಿ ಕಾಂಗ್ರೆಸ್ ಹಗಲು ವೇಷ ಹಾಕಿಕೊಂಡು ಡ್ರಾಮಾ ಮಾಡ್ತಿದೆ ಎಂದು ಟೀಕಿಸಿದರು.

ಉಡುಪಿ – ಚಿಕ್ಕಮಗಳೂರು ಕ್ಷೇತ್ರ ಟಿಕೆಟ್ ವಿಚಾರ. ಶೋಭಾ ಕರಂದ್ಲಾಜೆ ವಿರುದ್ದ ಷಡ್ಯಂತ್ರ ನಡೆಯುತ್ತಿದೆ ಎಂಬ ಬಿಎಸ್ ವೈ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಟಿ ರವಿ  ಬಾಸ್ ಇಸ್ ಆಲ್ ವೇಸ್ ರೈಟ್. ಬಾಸ್ ವಿರುದ್ದ ಯಾವಾತಾದರೂ ಮಾತಾಡಲು ಯಾರಿಗಾದರೂ ಸಾಧ್ಯನಾ? ನಾನು ಯಾವತ್ತೂ ಕ್ಷೇತ್ರದ ಆಕಾಂಕ್ಷಿ ಎಂದು ಹೇಳಿಲ್ಲ.  ಹೀಗಾಗಿ ಅಲ್ಲಿ ನಡೆಯುತ್ತಿರುವ ವಿದ್ಯಮಾನ ನನಗೆ ಸಂಬಂಧಿದ್ದು ಅಂತಾ ಹೇಗೆ ಹೇಳ್ತಿರಾ? ಎಂದು ಪ್ರಶ್ನಿಸಿದರು.

10 ವರ್ಷಗಳ ಕಾಲಘಟ್ಟದಲ್ಲಿ ಮೋದಿಯವರು ರಾಜ್ಯಕ್ಕೆ 4.91 ಸಾವಿರ ಅನುದಾನ ಕೊಟ್ಟಿದ್ದಾರೆ. ನಿಮ್ಮ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 10 ವರ್ಷಗಳಲ್ಲಿ ಕೇವಲ 192 ಕೋಟಿ ಕೊಟ್ಟಿದ್ರು. ಯಾವುದು ಹೆಚ್ಚು ಅಂತ ಹೇಳಿ ಬನ್ನಿ ಪ್ರಮಾಣ ಮಾಡಿ. ಗುತ್ತಿಗೆದಾರರಿಗೆ ಎಷ್ಟು ಹಣ ಕೊಟ್ಟಿದ್ದೀರಿ ಬಿಲ್ ಕೊಟ್ಟಿರುವ ಬಗ್ಗೆ ಶ್ವೇತ ಪತ್ರ ಹೊರಡಿಸಿ. 10 ತಿಂಗಳ ನಿಮ್ಮ ಸಾಧನೆ ಏನು ಅಂತ ಹೇಳಿ. ಮೋದಿಯವರನ್ನ ಬಯ್ಯೋದೆ ನಿಮ್ಮ ಸಾಧನೆ. ನೀವು ಆಕಾಶಕ್ಕೆ ಉಗುಳುವ ಕೆಲಸ ಮಾಡುತ್ತಿದ್ದೀರಿ. ಜನ ನಿಮಗೆ ತಕ್ಕ ಉತ್ತರ ಕೊಡುತ್ತಾರೆ ಎಂದು ಸಿ. ಟಿ ರವಿ ವಾಗ್ದಾಳಿ ನಡೆಸಿದರು.

Key words: Tool kit –politics-divide –rule- policy – Congress-Former Minister- CT Ravi