Wednesday, August 12, 2026

BDA Apartments

Home Front Page ‘ಮುಡಾ’ ಅಧ್ಯಕ್ಷರಾಗಿ ಕೆ.ಮರೀಗೌಡ ಅಧಿಕಾರ ಸ್ವೀಕಾರ.

‘ಮುಡಾ’ ಅಧ್ಯಕ್ಷರಾಗಿ ಕೆ.ಮರೀಗೌಡ ಅಧಿಕಾರ ಸ್ವೀಕಾರ.

ಮೈಸೂರು,ಮಾರ್ಚ್,1,2024(www.justkannada.in): ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷರಾಗಿ ಕೆ. ಮರೀಗೌಡ ಇಂದು ಅಧಿಕಾರ ಸ್ವೀಕರಿಸಿದರು.

ಮುಡಾ ಅಧ್ಯಕ್ಷ ಕೊಠಡಿಯಲ್ಲಿ  ಕೆ. ಮರೀಗೌಡ ಅವರು ಅಧಿಕಾರ ಸ್ವೀಕಾರ ಮಾಡಿದರು.  ಅಧಿಕಾರ ಸ್ವೀಕಾರಕ್ಕೂ ಮುನ್ನ  ಕೆ. ಮರೀಗೌಡ ಅಚರು ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ನೂತನ ಮುಡಾ ಅಧ್ಯಕ್ಷರಿಗೆ ಮುಡಾ ಆಯುಕ್ತ ದಿನೇಶ್ ಕುಮಾರ್ ಶುಭಕೋರಿದರು.

ಬಳಿಕ ಮಾತನಾಡಿದ ಕೆ.ಮರೀಗೌಡ, ಸಿಎಂ ಸಿದ್ದರಾಮಯ್ಯನವರು ನನಗೆ ಭರವಸೆ ಕೊಟ್ಟಿದ್ದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ ನಾನೇ ಸಿಎಂ ಆಗುತ್ತೇನೆ. ನಿನ್ನನ್ನ ಮುಡಾ ಅಧ್ಯಕ್ಷನಾಗಿ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದರು. ಕೊಟ್ಟ ಮಾತಿನಂತೆ ನಡೆದುಕೊಳ್ಳುವ ವ್ಯಕ್ತಿ ಸಿದ್ದರಾಮಯ್ಯನವರು ಎಂದು ನುಡಿದರು.

ಮೈಸೂರಿನಲ್ಲಿ ಇನ್ನು ಸಹ ಅನೇಕರು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ. ಬೀದಿ ಬದಿ ವ್ಯಾಪಾರ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ. ಸೂರಿಲ್ಲದವರಿಗೆ ಮನೆ ನಿರ್ಮಾಣ ಮಾಡಿಕೊಡುವುದು ನಮ್ಮ ಜವಾಬ್ದಾರಿ. ಮುಡಾದಿಂದ ಸಿಗುವ ಸೌಲಭ್ಯಗಳನ್ನ ಜನರಿಗೆ ತಲುಪಿಸುತ್ತೇನೆ. ಸರ್ಕಾರಕ್ಕೆ ಕಪ್ಪು ಚ್ಯುತಿ ಬರದ ಹಾಗೆ ಉತ್ತಮ ಆಡಳಿತ ನೀಡುತ್ತೇನೆ ಎಂದು ಕೆ. ಮರೀಗೌಡ ಹೇಳಿದರು.

Key words: Mysore Urban Development Authority-K. Marigowda –president