Thursday, August 13, 2026

BDA Apartments

Home DASARA-2019 ನಾಳೆ ನಾಡಹಬ್ಬ ದಸರಾ ಉದ್ಘಾಟನೆ ಹಿನ್ನೆಲೆ: ಇಂದು ಸಂಜೆ ಮೈಸೂರಿಗೆ ಸಿಎಂ ಬಿಎಸ್ ಯಡಿಯೂರಪ್ಪ…

ನಾಳೆ ನಾಡಹಬ್ಬ ದಸರಾ ಉದ್ಘಾಟನೆ ಹಿನ್ನೆಲೆ: ಇಂದು ಸಂಜೆ ಮೈಸೂರಿಗೆ ಸಿಎಂ ಬಿಎಸ್ ಯಡಿಯೂರಪ್ಪ…

ಮೈಸೂರು,ಸೆ,28,2019(www.justkannada.in): ನಾಳೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯಾಗಲಿದ್ದು ಈ ಹಿನ್ನೆಲೆ ಇಂದು ಸಂಜೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮೈಸೂರಿಗೆ ಆಗಮಿಸಲಿದ್ದಾರೆ.

ನಾಳೆ  ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವವನ್ನ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಉದ್ಘಾಟನೆ ಮಾಡಲಿದ್ದಾರೆ. ಈ ಹಿನ್ನೆಲೆ ಇಂದು ಸಂಜೆಯೇ ಸಿಎಂ  ಬಿಎಸ್ ಯಡಿಯೂರಪ್ಪ ಮೈಸೂರಿಗೆ ಆಗಮಿಸಲಿದ್ದಾರೆ.  ಮೈಸೂರಿಗೆ ಬಂದ ಬಳಿಕ ಇಂದು ಸಂಜೆ  ಹಿರಿಯ ಸಾಹಿತಿ, ಈ ಬಾರಿಯ ದಸರಾ ಉದ್ಘಾಟಕ ಎಸ್. ಎಲ್ ಭೈರಪ್ಪ ಮನೆಗೆ ಸಿಎಂ ಬಿಎಸ್ ವೈ ಭೇಟಿ ನೀಡಲಿದ್ದಾರೆ.

ನಾಳೆಯಿಂದ ಮೈಸೂರಿನಲ್ಲಿ  ನವರಾತ್ರಿ ಸಂಭ್ರಮ ಶುರುವಾಗಲಿದ್ದು ಅರಮನೆ ನಗರಿ ಕಳೆಗಟ್ಟಲಿದೆ. ನಾಳೆ ದಸರಾದ  ಉದ್ಘಾಟನೆ  ಇರುವ ಹಿನ್ನೆಲೆ ಇಡೀ ಸರ್ಕಾರವೇ ಬೆಂಗಳೂರಿನಿಂದ ಮೈಸೂರಿಗೆ ಶಿಫ್ಟ್ ಆಗಲಿದೆ. ನಾಳೆ ನಾಡ ಕುಸ್ತಿ, ವಸ್ತು ಪ್ರದರ್ಶನ, ಪುಸ್ತಕ ಮೇಳ, ಆಹಾರ ಮೇಳ. ಫಲಪುಷ್ಪ ಪ್ರದರ್ಶನ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ  ಹಲವು ಸಚಿವರುಗಳು  ಉದ್ಘಾಟನೆ ಮಾಡಲಿದ್ದಾರೆ.

Key words:  tomorrow- Inauguration-mysore Dasara -CM BS Yeddyurappa -today