ಬೇರೆ ರಾಜ್ಯದ ಸಿಎಂಗಳಿಗೆ ಮತ್ತು ಗಣ್ಯರಿಗೂ ಮೈಸೂರು ದಸರಾ ಆಹ್ವಾನ ನೀಡಿ- ಅಧಿಕಾರಿಗಳಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಸೂಚನೆ…

ಮೈಸೂರು,ಸೆ,28,2019(www.justkannada.in): ಬೇರೆ ರಾಜ್ಯದ ಮುಖ್ಯಮಂತ್ರಿಗಳು, ಗಣ್ಯರುಗಳಿಗೆ ಮೈಸೂರು ದಸರಾ ಆಹ್ವಾನ ಕಳುಹಿಸಿ ಎಂದು  ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಸೂಚನೆ ನೀಡಿದರು.

ಪ್ರವಾಸೋದ್ಯಮ ಸಚಿವ ಸಿಟಿ ರವಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಸರಾ ಪೂರ್ವ ಸಿದ್ದತಾ ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಜಿಪಂ ಸಿಇಒ ಜ್ಯೋತಿ, ಎಸ್ ಪಿ ರಿಷ್ಯಂತ್ ಸೇರಿದಂತೆ ಉಪಸಮಿತಿ ಮುಖ್ಯ ಅಧಿಕಾರಿಗಳು ಭಾಗಿಯಾಗಿದ್ದರು.

ಸಭೆಯಲ್ಲಿ ಮಾತನಾಡಿದ ಸಚಿವ ಸಿ.ಟಿ ರವಿ, ಈಗಾಗಲೆ ಎಲ್ಲಾ ಸಿದ್ದತೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ  ಅಚ್ಚುಕಟ್ಟಾಗಿ ನೆರವೇರಿದೆ. ಔಪಚಾರಿಕವಾಗಿ ಸಭೆ ಮಾಡಲಾಗುತ್ತಿದೆ.. ನಮ್ಮೆಲ್ಲಾ ಅಧಿಕಾರಿಗಳು ಅನುಭವಿಗಳಾಗಿದ್ದೀರಿ. ಏನೆಲ್ಲಾ ಸಿದ್ದತೆ ನಡೆದಿದೆ ಎನ್ನುವುದನ್ನ ತಿಳಿದುಕೊಳ್ಳಲು ಸಭೆ ನಡೆಸುತ್ತಿದ್ದೇನೆ. ಸಿದ್ಧತೆ ಬಗ್ಗೆ ಮಾಹಿತಿ ನೀಡಿ ಎಂದು ಹೇಳೀ ಮಾಹಿತಿ ಪಡೆದರು.

ಇದೇ ವೇಳೆ  ಅಧಿಕಾರಿಗಳಿಗೆ ಕೆಲ ಸಲಹೆಗಳನ್ನ ನೀಡಿದ ಸಚಿವ ಸಿ.ಟಿ ರವಿ, ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಬೇರೆ ರಾಜ್ಯದ ರಾಜರಿಗೆ ದಸಾರ ಆಹ್ವಾನ ಕಳಿಸಲಾಗ್ತಿತ್ತು. ಈಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿಗಳು, ಪ್ರವಾಸೋದ್ಯಮ ಸಚಿವರಿಗೆ ದಸರಾ ಆಮಂತ್ರಣ ಕಳಿಸಿ. ಅಷ್ಟೇ ಅಲ್ಲದೆ ಕೇಂದ್ರ ಸಚಿವರು, ನಮ್ಮ ದೇಶದಲ್ಲಿರುವ ವಿದೇಶಿ ರಾಯಭಾರಿಗಳಿಗೂ ಆಹ್ವಾನ ನೀಡಿ. ಅವರು ಕುಟುಂಬ ಸಮೇತರಾಗಿ ಬರಲು ಅವರನ್ನು ಆಹ್ವಾನಿಸಿ. ಈ ವರ್ಷದಿಂದ ಒಂದು ಹೊಸ ಪದ್ಧತಿ ಜಾರಿಗೆ ಬರಲಿ ಎಂದು ಸೂಚಿಸಿದರು.

ಸಭೆ ಬಳಿಕೆ ದಸರಾಗೆ ಅಂತರಾಷ್ಟ್ರೀಯ ಪ್ರವಾಸಿಗರನ್ನ ಸೆಳೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸಿ.ಟಿ ರವಿ, ದಸರಾಗೆ ಪ್ರವಾಸಿಗರನ್ನ  ಒಂದು ತಿಂಗಳಲ್ಲಿ ಸೆಳೆಯಲು ಆಗಲ್ಲ. ಕನಿಷ್ಟ ಆರು ತಿಂಗಳಾದರು ಬೇಕು. ಆರು ತಿಂಗಳಿಂದ ಕಾರ್ಯ ಆರಂಭಿಸಿದರೆ ಪ್ರವಾಸಿಗರನ್ನ ಸೆಳೆಯಬಹುದಿತ್ತು. ಈಗ ದಸರಾಗೆ ಹೆಚ್ಚು ಪ್ರವಾಸಿಗರನ್ನ ಸೆಳೆಯಲು ಆಗಲ್ಲ ಎಂದರು.

ದೇಶಕ್ಕೆ ಒಂದೇ ರೀತಿಯ ಜಿಎಸ್ ಟಿ ಇರುವಂತೆ ವಾಹನಗಳ ಸಾರಿಗೆ ಶುಂಕ ಒಂದೇ ರೀತಿ ಇರಬೇಕು. ಇದಕ್ಕೆ ಸಂಬಂಧಿಸಿದಂತೆ ‌ಎಲ್ಲಾ ರಾಜ್ಯಗಳ ಜೊತೆ ಮಾ‌ತನಾಡಬೇಕು. ಆಯೋಗದ ಜೊತೆ ಸಹ ಚರ್ಚೆ ಮಾಡಬೇಕು. ಆಗ ಪ್ರವಾಸೋದ್ಯಮ ಅಭಿವೃದ್ಧಿ ಆಗುತ್ತದೆ. ಇದು ನನ್ನ ಅಭಿಪ್ರಾಯ ಎಂದು ಸಚಿವ ಸಿ.ಟಿ ರವಿ ತಿಳಿಸಿದರು.

ಕೇರಳದಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವರಿಗೆ ಹೊಟೆಲ್ ಟ್ಯಾಕ್ಸ್ ಕಡಿಮೆ ಮಾಡುವಂತೆ ಮನವಿ ಮಾಡಿದ್ವಿ. ಇದಕ್ಕೆ ಕೆಂದ್ರ ಸಚಿವರು ಸ್ಪಂದಿಸಿದ್ದಾರೆ. 3 ಸ್ಟಾರ್  ಹೋಟೆಲ್ ಟ್ಯಾಕ್ಸ್ ಅನ್ನು ಶೇ.18ಕ್ಕೆ ಇಳಿಕೆ ಮಾಡಿದ್ದಾರೆ. ಶೇ 18. ಇದ್ದಂತಹ ಬಜೆಟ್ ಹೋಟೆಲ್ ಟ್ಯಾಕ್ಸ್ ಅನ್ನು ಶೇ.12ಕ್ಕೆ ಇಳಿಸಿದ್ದಾರೆ. ಕ್ಯಾಟಿರಿಂಗ್ ಮಾಡುವವರಿಗೆ ಶೇ. 5ಕ್ಕೆ ಇಳಿಸಿದ್ದಾರೆ. ಇದರಿಂದ ಹೋಟೆಲ್ ಉದ್ಯಮಿಗಳಿಗೆ ಅನುಕೂಲವಾಗಿದೆ. ಅದಕ್ಕೆ ಕೇಂದ್ರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

Key words: Mysore Dasara –invites-other state-CMs –ministers-Tourism Minister- CT Ravi- instructs