Friday, October 9, 2026

BDA Apartments

Home Cinema ನಾಳೆ ಚಿರಂಜೀವಿ ಸರ್ಜಾ ಪುಣ್ಯತಿಥಿ

ನಾಳೆ ಚಿರಂಜೀವಿ ಸರ್ಜಾ ಪುಣ್ಯತಿಥಿ

ಬೆಂಗಳೂರು, ಜೂನ್ 16, 2020 (www.justkannada.in): ಜೂನ್ 17ರಂದು ಚಿರು ಸರ್ಜಾ ಪುಣ್ಯತಿಥಿ ಕಾರ್ಯ ಮಾಡಲಾಗುತ್ತಿದೆ.

ಸರ್ಜಾ ಕುಟುಂಬ ಬುಧವಾರ ಬೆಳಗ್ಗೆ 10.30ಕ್ಕೆ ಚಿರು ಅಂತ್ಯ ಸಂಸ್ಕಾರ ನಡೆದ ಕನಕಪುರ ರಸ್ತೆಯ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಚಿರು ಪುಣ್ಯತಿಥಿ ಮಾಡುತ್ತಿದೆ.

ನಟ ಚಿರಂಜೀವಿ ಸರ್ಜಾ ನಿಧನ ಹೊಂದಿ 10 ದಿನಗಳಾಯಿತು. ಚಿರು ಸರ್ಜಾ ಹಠಾತ್ ಅಗಲಿಕೆಯ ಆಘಾತದಿಂದ ಕುಟುಂಬ್ಥರು ಇನ್ನೂ ಹೊರಬಂದಿಲ್ಲ. ಪ್ರತಿ ದಿನ ಚಿರು ನೆನಪು ಅವರನ್ನು ಕಾಡುತ್ತಿದೆ.

ಸಹೋದರ ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಅಣ್ಣನ ಜೊತೆ ಇರುವ ಪೋಸ್ಟ್ ಗಳನ್ನು ಹಾಕುತ್ತ ಅಣ್ಣನ ನೆನಪಲ್ಲೆ ದಿನಕಳೆಯುತ್ತಿದ್ದಾರೆ.