Saturday, August 22, 2026

BDA Apartments

Home Front Page ಟೋಕಿಯೋ ಒಲಿಂಪಿಕ್ಸ್’ಗೂ ಕೋವಿಡ್ ಕರಿನೆರಳು: ಕ್ರೀಡಾ ಗ್ರಾಮದಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆ

ಟೋಕಿಯೋ ಒಲಿಂಪಿಕ್ಸ್’ಗೂ ಕೋವಿಡ್ ಕರಿನೆರಳು: ಕ್ರೀಡಾ ಗ್ರಾಮದಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆ

ಬೆಂಗಳೂರು, ಜುಲೈ 18, 2021 (www.justkannada.in): ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾ ಗ್ರಾಮದಲ್ಲಿ ಮೊದಲ ಕೋವಿಡ್‌ ಪ್ರಕರಣ ದಾಖಲಾಗಿದೆ.

ಜಾಗತಿಕ ಕ್ರೀಡಾ ಕೂಟವಾದ ಒಲಿಂಪಿಕ್ಸ್‌ ಆರಂಭಕ್ಕೆ ಐದು ದಿನ ಬಾಕಿ ಉಳಿದಿರುವಂತೆ ಕೊರೊನಾ ಕರಿನೆರಳು ಕಾಡುವ ಆತಂಕ ಎದುರಾಗಿದೆ.

ಕ್ರೀಡಾ ಗ್ರಾಮದಲ್ಲಿ ಒಬ್ಬ ವ್ಯಕ್ತಿಗೆ ಸ್ಕ್ರೀನಿಂಗ್‌ ಪರೀಕ್ಷೆ ವೇಳೆ ಕೋವಿಡ್‌ ದೃಢಪಟ್ಟಿದೆ ಎಂದು ಕೂಟದ ಸಂಘಟಕರು ಈ ಕುರಿತು ಮಾಹಿತಿ ನೀಡಿದ್ದಾರೆ.

ಸೋಂಕಿತ ವ್ಯಕ್ತಿಯ ಗುರುತು ಮತ್ತು ಹೆಚ್ಚಿನ ಮಾಹಿತಿ ನೀಡಲಾಗಿಲ್ಲ. ಆದರೆ ಈತ ಆಯತ್ಲೀಟ್‌ ಅಲ್ಲ ಎಂದಷ್ಟೇ ತಿಳಿಸಲಾಗಿದೆ. ಸಾವಿರಾರು ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಇರುವ ಕ್ರೀಡಾಗ್ರಾಮದಿಂದ ಸೋಂಕಿತನನ್ನು ಬೇರೆಡೆಗೆ ಸ್ಥಳಾಂತರಿಸಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.