ಇಂದು ಇಂಡಿಯಾ-ವೆಸ್ಟ್ ಇಂಡೀಸ್ 3ನೇ ಏಕದಿನ ಪಂದ್ಯ

ಬೆಂಗಳೂರು, ಜುಲೈ 26, 2022 (www.justkannada.in): ಟೀಂ ಇಂಡಿಯಾ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಇಂದು ಎದುರಿಸಲಿದೆ.

ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ 312ರನ್‌ಗಳ ಗುರಿಯನ್ನ ಯಶಸ್ವಿಯಾಗಿ ಬೆನ್ನತ್ತಿದ ಟೀಂ ಇಂಡಿಯಾ ಇನ್ನೆರಡು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ತಲುಪಿತ್ತು.

ಕ್ವೀನ್ಸ್ ಪಾರ್ಕ್ ಓವಲ್ ಮೈದಾನವು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದು, ಮತ್ತೊಮ್ಮೆ ಅಂತಿಮ ಪಂದ್ಯದಲ್ಲೂ ಬ್ಯಾಟರ್ಸ್‌ ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ಗಾಳಿಯ ವೇಗ ಗಂಟೆಗೆ 13 km ವೇಗದಲ್ಲಿ ಬೀಸಲಿದೆ. ಮಳೆ ಬರುವ ಸಾಧ್ಯತೆಯು ಕಡಿಮೆಯಿದೆ. ಇನ್ನು ಈ ಪಿಚ್‌ನಲ್ಲಿ ಮೊದಲ ಇನ್ನಿಂಗ್ಸ್‌ ಸರಾಸರಿ ಸ್ಕೋರ್ 305ರನ್‌ಗಳಷ್ಟಿದೆ.

ವೆಸ್ಟ್ ಇಂಡೀಸ್
ಶಾಯ್ ಹೋಪ್ (ವಿಕೆಟ್ ಕೀಪರ್), ಬ್ರಾಂಡನ್ ಕಿಂಗ್, ಶಮರ್ ಬ್ರೂಕ್ಸ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ನಾಯಕ), ರೋವ್‌ಮನ್ ಪೊವೆಲ್, ಅಕೆಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಅಲ್ಜಾರಿ ಜೋಸೆಫ್, ಹೇಡನ್ ವಾಲ್ಷ್, ಜೇಡನ್ ಸೀಲ್ಸ್

ಟೀಂ ಇಂಡಿಯಾ
ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್‌), ದೀಪಕ್ ಹೂಡಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಯುಜವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್, ಅವೇಶ್ ಖಾನ್