‘777 ಚಾರ್ಲಿ’ ಓಟಿಟಿ ರಿಲೀಸ್ ಡೇಟ್ ಅನೌನ್ಸ್

ಬೆಂಗಳೂರು, ಜುಲೈ 26, 2022 (www.justkannada.in): 777 ಚಾರ್ಲಿ  ಓಟಿಟಿ ರಿಲೀಸ್​ ಡೇಟ್​ ಅನೌನ್ಸ್ ಆಗಿದೆ.

ಹೌದು, ಈ ಸಿನಿಮಾ ಜುಲೈ 29ರಂದು ಓಟಿಟಿಯಲ್ಲಿ ಬಿಡುಗಡೆಯಾಗಲಿದೆ. ಸಿಂಪಲ್​ ಸ್ಟಾರ್​ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಾಕಷ್ಟು ಹವಾ ಎಬ್ಬಿಸಿತ್ತು. ಇದೀಗ ಒಟಿಟಿಯಲ್ಲಿ ಪ್ರದರ್ಶನಕ್ಕೆ ಸಜ್ಜಾಗಿದೆ.

ಚಿತ್ರವು 29 ಜುಲೈ ಅಂದು ವೂಟ್​ ನಲ್ಲಿ ಬಿಡುಗಡೆ ಆಗಲಿದೆ. ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಸಖತ ಸದ್ದು ಮಾಡಿತ್ತು.

ನಾಯಿ ಮತ್ತು ಮನುಷ್ಯನ ನಡುವಿನ ಉತ್ತಮ ಬಾಂಧವ್ಯವನ್ನು ತೋರಿಸುವ ಈ ಚಿತ್ರ ಎಲ್ಲರವನ್ನು ಭಾವುಕಗೊಳಿಸಿತ್ತು. ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾ ಮನುಷ್ಯ ಹಾಗೂ ನಾಯಿಯ ನಡುವಿನ ಪ್ರೀತಿಯ ಸಂಬಂಧವನ್ನು ಸಾರಿ ಹೇಳುತ್ತದೆ.