ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟವರ ನಿವಾಸಕ್ಕೆ ಟಿಎಂಸಿ ನಿಯೋಗ ಭೇಟಿ: ಪರಿಹಾರ ಚೆಕ್ ವಿತರಣೆ…

ಮಂಗಳೂರು ಡಿ,28,2019(www.justkannada.in):  ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ್ದ  ಫೈರಿಂಗ್ ನಲ್ಲಿ ಮೃತಪಟ್ಟವರ ನಿವಾಸಕ್ಕೆ ಇಂದು ತೃಣಮೂಲ ಕಾಂಗ್ರೆಸ್ ನಿಯೋಗ ಭೇಟಿ ನೀಡಿತು.

ಮಂಗಳೂರಿನ  ಕುದ್ರೋಳಿ ಮತ್ತು ಕಂದಕ್ ನಲ್ಲಿರುವ ಮೃತಪಟ್ಟವರ ನಿವಾಸಕ್ಕೆ  ಟಿಎಂಸಿ ನಿಯೋಗ ಭೇಟಿ ನೀಡಿ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಚೆಕ್ ವಿತರಣೆ ಮಾಡಿತು. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸೂಚನೆ ಮೇರೆಗೆ ನಿಯೋಗ ಭೇಟಿ ನೀಡಿ ಪರಿಹಾರ ಚೆಕ್ ವಿತರಿಸಿದೆ.

ಗೋಲಿಬಾರ್  ಮೃತಪಟ್ಟ ಇಬ್ಬರ ಕುಟುಂಬಸ್ಥರಿಗೆ ಪಶ್ಟಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಗೆ 5 ಲಕ್ಷ ಪರಿಹಾರವನ್ನು ಘೋಷಣೆ ಮಾಡಿದ್ದರು. ಮಂಗಳೂರಿನಲ್ಲಿ ಇತ್ತೀಚೆಗೆ ಪೌರತ್ವ ಕಾಯ್ದೆ ವಿರೋಧಿಸಿ ನಡೆದ  ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ವೇಳೆ ಗೋಲಿಬಾರ್ ನಡೆದು ಇಬ್ಬರು ಮೃತಪಟ್ಟಿದ್ದರು.  ಗೋಲಿಬಾರ್ ಗೆ ಬಲಿಯಾಗಿದ್ದ ಇಬ್ಬರಿಗೆ ಜೆಡಿಎಸ್ 5 ಲಕ್ಷ, ಕಾಂಗ್ರೆಸ್ ತಲಾ 7.5 ಲಕ್ಷ ಪರಿಹಾರವನ್ನು ನೀಡಿತ್ತು. ಇದಾದ ನಂತ್ರ ರಾಜ್ಯ ಸರ್ಕಾರ ಕೂಡ 10 ಲಕ್ಷ ಪರಿಹಾರ ಘೋಷಿಸಿ,ಅದಕ್ಕೆ ತಡೆ ನೀಡಿದೆ.

Key words: TMC delegation- visits – residence – deceased –Golibar- Mangalore