ಯಾವ ಬಂಡೆಯಾದರೇನು ಸ್ವಾಮಿ ಎದ್ದು ಬಂದು ವಿರೋಧಿಸುವುದೇ ಸೈ-ಯೇಸು ಪ್ರತಿಮೆ ನಿರ್ಮಾಣ ಕುರಿತು ಡಿಕೆ ಶಿವಕುಮಾರ್ ವಿರುದ್ದ ಅನಂತ್ ಕುಮಾರ್ ಹೆಗಡೆ ಕಿಡಿ…

ಬೆಂಗಳೂರು,ಡಿ,27,2019(www.justkannada.in):  ಕನಕಪುರ ತಾಲೂಕಿನ ಹಾರೋಬೆಲೆಯಲ್ಲಿ ಯೇಸುಕ್ರಿಸ್ತ ಪ್ರತಿಮೆ ನಿರ್ಮಾಣ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಶಿಲಾನ್ಯಾಸ ನೇರವೇರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಅನಂತ್ ಕುಮಾರ್ ಹೆಗಡೆ ಟ್ವಿಟ್ಟರ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅನಂತಕುಮಾರ್ ಹೆಗಡೆ, ಕಾವೇರಮ್ಮನ ನೀರನ್ನ ಕುಡಿದವರು ನಾವು. ಮಾಗಡಿ ಕೆಂಪೇಗೌಡರನ್ನು ಆರಾಧಿಸಿದವರು ನಾವು. ಅವರ ಪುಣ್ಯ ಭೂಮಿಯಲ್ಲೇ ಅವರಿಗೆ ಅಪಚಾರ. ಅಪಚಾರ ಮಾಡಿದ್ರೆ ಸುಮ್ಮನಿರಲು ನಾನೇನು ವ್ಯವಹಾರಸ್ಥನಲ್ಲ. ಅದು ಯಾವ ಬಂಡೆಯಾದರೇನು ಸ್ವಾಮಿ ಎದ್ದು ಬಂದು ವಿರೋಧಿಸುವುದೇ ಸೈ ಎಂದು ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಟಾಂಗ್ ನೀಡಿದ್ದಾರೆ.

ಕನಕಪುರ ಬಳಿಯ ಹಾರೋಬೆಲೆಯಲ್ಲಿ ಏಸುಕ್ರಿಸ್ತನ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಶಿಲಾನ್ಯಾಸ ನೆರವೇರಿಸಿದ್ದಾರೆ.  ಈ ಬಗ್ಗೆ ಬಿಜೆಪಿ ನಾಯಕರು ಟೀಕೆ ವ್ಯಕ್ತಪಡಿಸಿದ್ದಾರೆ.

Key words: construction- statue – Jesus- Ananth Kumar hedge-  against- DK Sivakumar