Sunday, August 9, 2026

BDA Apartments

Home Front Page ಟಿಪ್ಪು ಕುರಿತ ಇತಿಹಾಸವನ್ನ ಪಠ್ಯಪುಸ್ತಕದಿಂದ ತೆಗೆಯುತ್ತೇವೆ- ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ….

ಟಿಪ್ಪು ಕುರಿತ ಇತಿಹಾಸವನ್ನ ಪಠ್ಯಪುಸ್ತಕದಿಂದ ತೆಗೆಯುತ್ತೇವೆ- ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ….

ಬೆಂಗಳೂರು,ಅ,30,2019(www.justkannada.in): ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಟಿಪ್ಪು ಜಯಂತಿ ಆಚರಣೆಯನ್ನ  ರಾಜ್ಯ ಬಿಜೆಪಿ ಸರ್ಕಾರ ರದ್ಧುಗೊಳಿಸಿದ ಮೇಲೆ ಇದೀಗ ಟಿಪ್ಪು ಇತಿಹಾಸವನ್ನ ಪಠ್ಯಪುಸ್ತಕದಿಂದ ತೆಗೆದು ಹಾಕಲು ಮುಂದಾಗಿದೆ.

ಟಿಪ್ಪು ಕುರಿತ ಇತಿಹಾಸವನ್ನ ಪಠ್ಯಪುಸ್ತಕದಿಂದ ತೆಗೆಯುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಪಠ್ಯಪುಸ್ತಕದಿಂದ ಟಿಪ್ಪು ಪಾಠವನ್ನು ತೆಗೆದುಹಾಕಲಾಗುವುದು. ಅಂತಹ ಯಾವುದೇ ವಿಚಾರ ಪಠ್ಯ ಪುಸ್ತಕದಲ್ಲಿ ಇರಬಾರದು.  ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಎಂದು ತಿಳಿಸಿದ್ದಾರೆ.

ಟಿಪ್ಪು ಜಯಂತಿಗೆ ಅವಕಾಶ ನೀಡುವುದಿಲ್ಲ. ಟಿಪ್ಪು ಜಯಂತಿಯ ಎಲ್ಲಾ ಆದೇಶವನ್ನ ಹಿಂಪಡೆಯುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.  ಹಿಂದಿನ ಕಾಂಗ್ರೆಸ್ ಸರ್ಕಾರ ಆಚರಣೆಗೆ ತಂದಿದ್ದ ಟಿಪ್ಪು ಜಯಂತಿಯನ್ನ ಬಿಜೆಪಿ ಸರ್ಕಾರ ರದ್ಧುಗೊಳಿಸಿದೆ.

Key words: Tippu – taken – history- textbook-CM BS Yeddyurappa