ಟಿಪ್ಪು ಇತಿಹಾಸ ಕೈ ಬಿಡುವ ವಿಚಾರ ಕುರಿತು ಸಿಎಂಗೆ ಸಲಹೆ: ಮೈಸೂರು ಮೇಯರ್- ಉಪಮೇಯರ್ ಚುನಾವಣೆ ಬಗ್ಗೆ ಸಾ.ರಾ ಮಹೇಶ್ ಪ್ರತಿಕ್ರಿಯಿಸಿದ್ದು ಹೀಗೆ…?

ಮೈಸೂರು,ನ,1,2019(www.justkannada.in): ಟಿಪ್ಪು ಇತಿಹಾಸವನ್ನ ಪಠ್ಯಯಿಂದ ಕೈಬಿಡುವ ವಿಚಾರ ಸಂಬಂಧ, ಸಮಿತಿಯಿಂದ ಏನೇ ವರದಿ ಬರಲಿ. ಮುಖ್ಯಮಂತ್ರಿಗಳು ಸೂಕ್ಷ್ಮವಾಗಿ ಪರಿಶೀಲಿಸಿ ಸಮುದಾಯಕ್ಕೆ ತೊಂದರೆ ಆಗದಂತೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಸಲಹೆ ನೀಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಸಾ.ರಾ ಮಹೇಶ್, ಇತಿಹಾಸ ಎನ್ನುವುದು ರಾಜಕೀಯ ಪಕ್ಷ, ರಾಜಕಾರಣಿಗಳು ಬರುವ ಮುಂಚೆಯೇ ಇದೆ. ಯಾವುದನ್ನ ಪಠ್ಯಕ್ಕೆ ಸೇರಿಸಬೇಕು, ಬೇಡ ಎಂಬುದನ್ನು ತಿಳಿದೆ ಸೇರಿಸಿದ್ದಾರೆ. ಅವುಗಳಿಂದಾಗುವ ಒಳಿತು ಕೆಡಕುಗಳನ್ನ ತಿಳಿದು ವಿಚಾರ ಸೇರಿಸಲಾಗಿದೆ. ಟಿಪ್ಪು ವಿಚಾರವನ್ನ ಪಠ್ಯೆದಿಂದ ಕೈಬಿಡುವ ಸರಿಯಲ್ಲ. ಕೇವಲ ಇಬ್ಬರ ಒತ್ತಡಕ್ಕೆ ಮಣಿದು ಈ ತೀರ್ಮಾನಕ್ಕೆ ಸಿಎಂ ಬರಬಾರದು. ಸಮಾಜದಲ್ಲಿ ಇಂತಹ ಬೆಳವಣಿಗೆ ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಮೈಸೂರು ರಾಜರೊಂದಿಗೆ ಟಿಪ್ಪು ಹೈದರ್ ಸಂಬಂಧದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಾ.ರಾ ಮಹೇಶ್, ಅದು ಇತಿಹಾಸ, ಈಗ ಅದು ಚರ್ಚೆಗೆ ಪ್ರಸ್ತುತವಲ್ಲ. ರಾಜ್ಯದಲ್ಲಿ ನೆರೆ ಸಂಬಂಧಿತ ಸಾಕಷ್ಟು ಸಮಸ್ಯೆಗಳಿವೆ. ಮೊದಲು ಅದಕ್ಕೆ ಮನ್ನಣೆ ನೀಡಲಿ ಎಂದರು.

ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ, ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮುಂದುವರಿಯುವ ವಿಚಾರ‌ ಕುರಿತು ಪ್ರತಿಕ್ರಿಯಿಸಿದ ಸಾ.ರಾ ಮಹೇಶ್, ಪಾಲಿಕೆ ಚುನಾವಣೆ ಸಂದರ್ಭದಲ್ಲಿ ನಡೆದಿದ್ದ ಒಪ್ಪಂದದಂತೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಗೆ 2 ಜೆಡಿಎಸ್  ಗೆ 3 ಬಾರಿ ಅವಕಾಶ ನೀಡಬೇಕು ಎಂದು ಒಪ್ಪಂದದಂತೆ ನಾವು ನಡೆದುಕೊಡಿದ್ದೇವೆ. ಕಾಂಗ್ರೆಸ್‌ ಅವರು ಅದೇ ರೀತಿ ನಡೆದುಕೊಳ್ಳಬೇಕು. ಈ ಬಗ್ಗೆ ಕಾಂಗ್ರೆಸ್ ನ ಸ್ಥಳೀಯ ನಾಯಕರ ಬಳಿ ಚರ್ಚೆ ಮಾಡಲಾಗಿದೆ. ನಮಗೆ ಈ ಬಾರಿ ಮೇಯರ್ ಸ್ಥಾನ ಖಚಿತ.ಹಲವು ವರ್ಷಗಳಿಂದ ಪರಿಶಿಷ್ಟ ಪಂಗಡಕ್ಕೆ ಮೇಯರ್ ಸ್ಥಾನ ಸಿಕ್ಕಿಲ್ಲ.ಈ ಬಾರಿ ನಾಯಕ ಸಮುದಾಯಕ್ಕೆ ಅವರಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದರು.

ಜೆಡಿಎಸ್ ಎಲ್ಲರಿಗೂ ಅನಿವಾರ್ಯ….

ಜೆಡಿಎಸ್ ಎಲ್ಲರಿಗೂ ಅನಿವಾರ್ಯ. ಅನುಕೂಲಕ್ಕೆ ತಕ್ಕಂತೆ ಎಲ್ಲರು ಮಾತನಾಡುತ್ತಾರೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಎಲ್ಲರಿಗೂ ಇಷ್ಟ. ಜೆಡಿಎಸ್ ಬೇಕಿದ್ದಾಗ ಪರವಾಗಿ ಮಾತನಾಡುತ್ತಾರೆ. ಬೇಡದಾಗ ವಿರೋಧ ಮಾಡ್ತಾರೆ. ಈಗಲೂ ಕಾಂಗ್ರೆಸ್ ನ ರಾಷ್ಟ್ರ ಮತ್ತು ರಾಜ್ಯಮಟ್ಟದ ನಾಯಕರಿಗೆ ಮೈತ್ರಿ ಮುಂದುವರಿಸಲು ಆಸಕ್ತಿ ಇದೆ. ಕಾಂಗ್ರೆಸ್ ನ ಕೆಲವು ನಾಯಕರಿಗೆ ಆಸಕ್ತಿ ಇಲ್ಲ. ಅಂತವರು ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜೆಡಿಎಸ್ ಈ ಬಾರಿ ಎಲ್ಲಾ 15 ಕ್ಷೇತ್ರಗಳಲ್ಲೂ ಏಕಾಂಗಿ ಹೋರಾಟ ಮಾಡಲಿದೆ. ಉಪಚುನಾವಣೆ ನಡೆಯುವ ಎಲ್ಲಾ ಕ್ಷೇತ್ರಗಳಲ್ಲಿಯೂ ತ್ರಿಕೋನ ಸ್ಪರ್ಧೆ ನಡೆಯಲಿದೆ ಎಂದು ಸಾ.ರಾ ಮಹೇಶ್ ಹೇಳಿದರು.

Key words: Tippu history-cm bs yeddyurappa-Mysore -Mayor-Deputy Mayor- election-sara mahesh