ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಹತ್ಯೆಗೆ ಯತ್ನ:  ವ್ಯಕ್ತಿ ಪೊಲೀಸರ ವಶಕ್ಕೆ…

ಬೆಂಗಳೂರು,ಅ.18,2019(www.justkannada.in): ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಹತ್ಯೆಗೆ ಯುವಕನೊಬ್ಬ ಯತ್ನಿಸಿದ ಘಟನೆ ಇಂದು ನಡೆದಿದೆ.

ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಭೈರತಿಯಲ್ಲಿನ ನಿವಾಸದ ಬಳಿಯೇ ಈ ಘಟನೆ ನಡೆದಿದೆ. ಯುವಕನೊಬ್ಬ ಭೈರತಿ ಸುರೇಶ್ ಅವರ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದು, ಸದ್ಯ ಭೈರತಿ ಸುರೇಶ್ ಅಪಾಯದಿಂದ ಪಾರಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಭೈರತಿ ಸುರೇಶ್, ಯುವಕ ಚಾಕು ಹಾಕಲು ಬಂದ. ನಾನು ಎಸ್ಕೇಪ್ ಆದೆ. ನನಗೆ ಯಾರ ಮೇಲೂ ಅನುಮಾನವಿಲ್ಲ. ಆತ ಹೀಗೆ ಯಾಕೆ ಮಾಡಿದ ಎಂಬುದು ಗೊತ್ತಾಗುತ್ತಿಲ್ಲ ನಮ್ಮ ಗನ್‍ಮ್ಯಾನ್‍ಗಳ ಸಹಾಯದಿಂದ ಅಪಾಯದಿಂದ ಪಾರಾಗಿದ್ದೇನೆಂದು ಸುರೇಶ್ ತಿಳಿಸಿದ್ದಾರೆ.

ಕಳೆದ ಎರಡು-ಮೂರು ದಿನಗಳಿಂದ ನಮಗೆ ಪರಿಚಯವಿರುವ ಶಿವು ಎಂಬ ಹುಡುಗ ಮನೆ ಸುತ್ತಮುತ್ತ ಅಡ್ಡಾಡುತ್ತಿದ್ದನೆಂದು ನಮ್ಮ ಸೆಕ್ಯೂರಿಟಿ ತಿಳಿಸಿದ್ದಾರೆ. ಇಂದು ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ. ಯಾವ ಕಾರಣಕ್ಕಾಗಿ ಈ ರೀತಿ ಮಾಡಿದ್ದಾನೆಂಬುದು ಗೊತ್ತಿಲ್ಲ ಎಂದು ಭೈರತಿ ಸುರೇಶ್ ತಿಳಿಸಿದ್ದಾರೆ.

Key words: try-Attempt-murder – Congress MLA -Bhairati Suresh-man – detained – police.