Saturday, September 26, 2026

BDA Apartments

ಟಿಪ್ಪರ್- ಖಾಸಗಿ ಬಸ್ ಡಿಕ್ಕಿ: 13 ಮಂದಿ ಸಜೀವ ದಹನ BDA JK_Adv BDA Adv
Home Crime ಟಿಪ್ಪರ್- ಖಾಸಗಿ ಬಸ್ ಡಿಕ್ಕಿ: 13 ಮಂದಿ ಸಜೀವ ದಹನ

ಟಿಪ್ಪರ್- ಖಾಸಗಿ ಬಸ್ ಡಿಕ್ಕಿ: 13 ಮಂದಿ ಸಜೀವ ದಹನ

ಪ್ರಕಾಶಂ, ಮಾರ್ಚ್,26,2026 (www.justkannada.in):  ಟಿಪ್ಪರ್ ಮತ್ತು ಖಾಸಗಿ ಬಸ್ ಗಳ ನಡುವೆ ಡಿಕ್ಕಿಯಾಗಿ 13 ಮಂದಿ ಸಜೀವ ದಹನವಾಗಿರುವ ಘಟನೆ ಆಂಧ್ರದ ಪ್ರಕಾಶಂ ಜಿಲ್ಲೆಯ ರಾಯವರಂ ಬಳಿ ನಡೆದಿದೆ.

ಹೈದರಾಬಾದ್ ನಿಂದ ಪಮುರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ರಾಯವರಂ ಸಮೀಪ ಕ್ವಾರಿಗಳ ಬಳಿ ಟಿಪ್ಪರ್ ಗೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ  13 ಮಂದಿ ಸಜೀವ ದಹನವಾಗಿದ್ದು 27 ಮಂದಿಗೆ ಗಂಭೀರ ಗಾಯಗೊಂಡಿದ್ದಾರೆ.

ಗಾತಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು,  ಪ್ರಯಾಣಿಕರ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬಸ್ ಮತ್ತು ಟಿಪ್ಪರ್ ಎರಡೂ ಸಂಪೂರ್ಣ ಸುಟ್ಟಿ ಕರಕಲಾಗಿದೆ.

Key words: Tipper, private bus, collision, 13 people, burnt, alive